ಕಲಬುರಗಿಯಲ್ಲಿ ರೈತರಿಂದ ಬಿರುಸಿನ ಬಿತ್ತನೆ ಕಾರ್ಯ - ಮುಂಗಾರು ಬೆಳೆಗಳ ಬಿತ್ತನೆ ಲೇಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7695405-thumbnail-3x2-kalburgi.jpg)
ಭೂ ತಾಯಿಗೆ ಮುಂಗಾರಿನ ಅಭಿಷೇಕವಾಗುತ್ತಿದ್ದಂತೆ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಸಕಾಲಕ್ಕೆ ಮಳೆ ಇಲ್ಲದೆ ಬೆಳೆ ಬೆಳೆಯಲಾಗದೆ ಸತತ ನಷ್ಟ ಅನುಭವಿಸಿರುವ ಕಲಬುರಗಿ ಜಿಲ್ಲೆಯ ರೈತರು, ಈ ವರ್ಷ ಸಮೃದ್ಧ ಮಳೆಯ ನಿರೀಕ್ಷೆಯಲ್ಲಿದ್ದರು. ಇದೀಗ ಸಮರ್ಪಕ ಮುಂಗಾರು ಮಳೆ ಸುರಿದಿದ್ದು, ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ರೈತ ಸಂಪರ್ಕ ಕೇಂದ್ರಗಳಿಂದ ರೈತರು ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ತೆಗೆದುಕೊಂಡು ಹೋಗಿ ಶೇಖರಣೆ ಮಾಡಿಕೊಂಡಿದ್ದಾರೆ.