ಆನಂದಸಿಂಗ್ ಪಕ್ಕಾ ಅನುಯಾಯಿಗಳೇ ಸೀನ್ ಕ್ರಿಯೇಟ್ ಮಾಡಿದ್ದಾರೆ: ಉಗ್ರಪ್ಪ ಕಿಡಿ ಕಿಡಿ! - ವಿ.ಎಸ್.ಉಗ್ರಪ್ಪ
🎬 Watch Now: Feature Video
ಬಳ್ಳಾರಿ: ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಪರವಾದ ಪ್ರಚಾರ ಕಾರ್ಯದ ನಿಮಿತ್ತ ಕರೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು, ಮಾಧ್ಯಮದವರನ್ನು ಕೊಠಡಿಯೊಳಗೆ ಹಾಕಿ ಬೀಗ ಜಡಿದವರು ಆನಂದಸಿಂಗ್ ಅವರ ಪಕ್ಕಾ ಅನುಯಾಯಿಗಳು ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪನವರು ಕಿಡಿಕಾರಿದ್ದಾರೆ. ಪತ್ರಕರ್ತರು, ಮಾಧ್ಯಮದವರನ್ನೇ ಕಚೇರಿಯ ಕೊಠಡಿಯೊಳಗೆ ಬೀಗಹಾಕಿ ಹೋಗೋ ಧೈರ್ಯವನ್ನು ನಮ್ಮ ಕಾರ್ಯಕರ್ತರು ಮಾಡಲ್ಲ. ಶ್ರೀನಿವಾಸ ಮತ್ತು ಖಾದರ ಎಂಬುವರು ಪಕ್ಕಾ ಆನಂದಸಿಂಗ್ ಅವರ ಅನುಯಾಯಿಗಳು. ಸೋಲಿನ ಹತಾಶೆಯಿಂದ ಹೀಗೆ ಮಾಡಿದ್ದಾರೆ ಎಂದು ಅವರು ಹೇಳಿದರು.