ETV Bharat / state

ವಿಧಾನಸಭೆಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಅಂಗೀಕಾರ: ಏನಿದು ಮಸೂದೆ? - MYSURU DEVELOPMENT AUTHORITY BILL

ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕವು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಹೊಸ ಕಾಯ್ದೆಯಂತೆ ಇನ್ಮುಂದೆ ಭೂ ಸ್ವಾಧೀನ ನಿವೇಶನ ಹಂಚಿಕೆ, ನಕ್ಷೆ ಮಂಜೂರಾತಿ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬರಲಿದೆ.

assembly session
ವಿಧಾನಸಭೆ ಕಲಾಪ (ETV Bharat)
author img

By ETV Bharat Karnataka Team

Published : Dec 19, 2024, 9:20 AM IST

ಬೆಳಗಾವಿ: 2024ನೇ ಸಾಲಿನ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿದೆ. ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಗುರುವಾರ ವಿಧಾನಸಭೆಯಲ್ಲಿಈ ವಿಧೇಯಕವನ್ನು ಪರ್ಯಾಲೋಚನೆ ಹಾಗೂ ಅಂಗೀಕಾರಕ್ಕಾಗಿ ಸದನದ ಮುಂದೆ ಮಂಡಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಗಾಗಿ ವಿಧೇಯಕವನ್ನು ರಚನೆ ಮಾಡಲಾಗಿದೆ. ಪ್ರಾಧಿಕಾರಕ್ಕೆ ಹಿರಿಯ ಶ್ರೇಣಿ ಐಎಎಸ್ ಅಧಿಕಾರಿಯನ್ನು ಆಯಕ್ತರನ್ನಾಗಿ ನೇಮಿಸಲು ಅವಕಾಶ ನೀಡಲಾಗಿದೆ. ಪ್ರಾಧಿಕಾರ ಸದಸ್ಯತ್ವದ ನೇಮಕಕ್ಕೂ ತಿದ್ದುಪಡಿ ತಂದು ಸರ್ಕಾರಕ್ಕೆ ಸದಸ್ಯರ ನೇಮಕ ಮಾಡಲು ಅಧಿಕಾರ ನೀಡಲಾಗಿದೆ. ಮೈಸರೂ ಪಾರಂಪರಿಕ ಮಹತ್ವ ಕಾಪಾಡಲು ಪ್ರಾಧಿಕಾರದ ಅಡಿ ಪಾರಂಪರಿಕ ಕಟ್ಟಡಗಳ ರಕ್ಷಣಾ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.

ಶಾಸಕ ಶ್ರೀವತ್ಸ ವಿರೋಧ: ಇದಕ್ಕೂ ಮುನ್ನ ಮಾತನಾಡಿದ ಶಾಸಕ ಶ್ರೀವತ್ಸ, ಮುಡಾ ರಾಜ್ಯ, ದೇಶದಲ್ಲಿ ಸುದ್ದಿಯಾಗಿದೆ. ಈ ವಿಧೇಯಕದಲ್ಲಿ ಯಾವ ಸುಧಾರಣೆ ಇದೆ ಅಂತ ಗೊತ್ತಾಗುತ್ತಿಲ್ಲ. ಸುಧಾರಣೆ ಆಗಿರೋದು ಸದಸ್ಯರ ಸಂಖ್ಯೆ ಕಡಿಮೆ ಮಾಡಿರೋದು. ಎಲ್ಲ ಹಗರಣಗಳಿಗೆ ಶಾಸಕರೇ ಕಾರಣ ಅಂತ ಹೊರಗೆ ಸಂದೇಶ ಹೋಗುತ್ತಿದೆ.‌ ಒಬ್ಬರು ಶಾಸಕರನ್ನು ಮಾತ್ರ ನೀವು ಸದಸ್ಯರಾಗಿ ಮಾಡಲು ಹೋಗುತ್ತಿದ್ದೀರಿ.‌ ಆದರೆ ಉಳಿದ ಅಷ್ಟೂ ಶಾಸಕರು ಮುಡಾ ಹಗರಣದಲ್ಲಿ ಭಾಗಿದಾರರು, ಅದಕ್ಕೆ ಸರ್ಕಾರ ಶಾಸಕರನ್ನು ತೆಗೆಯುತ್ತಿದೆ ಅಂತ ಸಂದೇಶ ಹೋಗುತ್ತಿದೆ. ಶಾಸಕರು ಮುಡಾಗೆ ಸದಸ್ಯರು ಆಗುವ ಅಗತ್ಯವಿಲ್ಲ ಅಂತ ನಾನು ಆವತ್ತೇ ಸಚಿವ ಹೆಚ್.ಸಿ.ಮಹದೇವಪ್ಪ ಅವರಿಗೆ ಹೇಳಿದ್ದೆ. ಆದರೆ ಈಗ ಸಮಯ, ಸಂದರ್ಭ ಹೇಗಿದೆ?. ಶಾಸಕರೇ ಮುಡಾ ಹಗರಣ ಮಾಡಿದ್ದಾರೆಂದು ಅವರನ್ನು ತೆಗೆದಿದ್ದಾರೆ ಅಂತ ಜನರಿಗೆ ತಪ್ಪು ಸಂದೇಶ ಕೊಡಲು ಸರ್ಕಾರ ಮುಂದಾಗಿದೆ'' ಎಂದು ಆರೋಪಿಸಿದರು.

''ಜನಸ್ನೇಹಿ ಮಾಡಲು ಈ ವಿಧೇಯಕದಲ್ಲಿ ಏನೂ ಇಲ್ಲ. ಕನಿಷ್ಠ ಇಷ್ಟು ಎಕರೆ ಇದ್ದರೆ ಮಾತ್ರ ಲೇಔಟ್​​ಗೆ ಅನುಮತಿ ಕೊಡಬೇಕು ಅನ್ನುವ ನಿಯಮ ಇರಲಿ. ಆಯುಕ್ತರು ಪ್ರಾಧಿಕಾರದ‌ ತೀರ್ಮಾನಗಳನ್ನು ಪರಿಣಾಮವಾಗಿ ಕಾರ್ಯಗತಗೊಳಿಸಬೇಕು ಅಂತ ವಿಧೇಯಕದಲ್ಲಿ ಇದೆ. ಆದರೆ, ಇವತ್ತಿನವರೆಗೂ ಈ ಕಾಲಂ ಪ್ರಕಾರ ಯಾವ ಆಯುಕ್ತರೂ ಕೆಲಸ ಮಾಡಿಲ್ಲ. ಆಯುಕ್ತರ ಮೇಲೆ ಏನು ಶಿಸ್ತು ಕ್ರಮ ಆಗಿದೆ?'' ಎಂದು ಪ್ರಶ್ನಿಸಿದರು.‌

''ಸರ್ಕಾರದ ಆದೇಶವನ್ನು ಆಯುಕ್ತರು ಪಾಲಿಸಿಲ್ಲ ಅಂತ ಹಗರಣ ಆಗಿದೆ. ಇದೇ ಕಾರಣಕ್ಕೆ ಮುಡಾ ಹಗರಣ ಸುದ್ದಿಯಾಗಿರುವುದು. ಸರ್ಕಾರದ ಆದೇಶ ಪಾಲಿಸದ ಅಧಿಕಾರಿಗೆ ಶಿಕ್ಷೆ ಕೊಟ್ಟಿದ್ದರೆ ಈ ನಿಯಮಕ್ಕೆ ಅರ್ಥ ಬರುತ್ತಿತ್ತು. ಆದರೆ, ಆ ಅಧಿಕಾರಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ, ಮಾಧ್ಯಮ ಹೇಳಿಕೆ ಕೊಡುತ್ತಿದ್ದಾರೆ. ಈಗಿನವರೆಗೂ ಆ ಅಧಿಕಾರಿಗೆ ಶಿಕ್ಷೆ ಆಗಿಲ್ಲ. ಹಾಗಾಗಿ, ಇದರಲ್ಲಿ ತೋರಿಸಿರುವ ಈ ನಿಯಮ ಹಾಸ್ಯಾಸ್ಪದವಾಗಿದೆ'' ಎಂದರು.‌

''ಲೇಔಟ್ ನಿರ್ಮಿಸಲು ಡೆವೆಲಪರ್ ಗೆ ಐದು ವರ್ಷ ಕೊಟ್ಟಿದ್ದೀರಿ. ಐದು ವರ್ಷ ಬೇಡ, ಎರಡು ವರ್ಷ ಕೊಡಿ.‌ಕೆಲವು ಸಂದರ್ಭಗಳಲ್ಲಿ ಪ್ರಾಧಿಕಾರವು ನಿವೇಶನ ಮಾರುವಂತಿಲ್ಲ, ಅಥವ ಅನ್ಯಥಾ ವಿಲೇವಾರಿ ಮಾಡುವಂತಿಲ್ಲ ಅಂತ ಕಲಂ ಇದೆ ಇದರಲ್ಲಿದೆ. ಇದರ ಬಗ್ಗೆ ಸ್ಪಷ್ಟತೆ ಇಲ್ಲ, ಏನು ಹಾಗಂದ್ರೆ ಅಂತ ಸ್ಪಷ್ಟತೆಯ ಇಲ್ಲ'' ಎಂದು ಹೇಳಿದರು.

ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಜಿ.ಟಿ.ದೇವೇಗೌಡ, ವಿ.ಸುನಿಲ್ ಕುಮಾರ್, ಹೆಚ್.ಡಿ.ರೇವಣ್ಣ ವಿಧೇಯಕ ಕುರಿತು ಚರ್ಚಿಸಿದರು. ನಂತರ ವಿಧಾನಸಭೆಯಲ್ಲಿ ಧ್ವನಿ ಮತದ ಮೂಲಕ ಹಲವು ತಿದ್ದಪಡಿಯೊಂದಿಗೆ ವಿಧೇಯಕವನ್ನು ಅಂಗೀಕರಿಸಲಾಯಿತು.

ಏನಿದು ಮಸೂದೆ?: ಇದುವರೆಗೂ ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರದ 1987 ಕಾಯ್ದೆ ಅನ್ವಯ ಮುಡಾ ಕಾರ್ಯನಿರ್ವಹಿಸುತ್ತಿತ್ತು. ಹೊಸ ಕಾಯ್ದೆಯಂತೆ ಇನ್ನುಮುಂದೆ ಭೂ ಸ್ವಾಧೀನ ನಿವೇಶನ ಹಂಚಿಕೆ, ನಕ್ಷೆ ಮಂಜೂರಾತಿ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬರಲಿದೆ. ಇದುವರೆಗೆ ನೂರಕ್ಕೂ ಹೆಚ್ಚು ರಾಜಕೀಯ ನಾಯಕರೇ ಮುಡಾ ಸದಸ್ಯರಾಗಲು ಇದ್ದ ಅವಕಾಶ ಹೊಸ ಕಾಯ್ದೆಯನ್ವಯ 3-4 ರಾಜಕೀಯ ನಾಯಕರಿಗೆ ಮಾತ್ರ ಸದಸ್ಯರಾಗಲು ಅವಕಾಶ ಇರಲಿದೆ. ಅಧಿಕಾರಿಗಳಿಗೆ ಸದಸ್ಯರಾಗಲು ಹೆಚ್ಚು ಅವಕಾಶ ಇರಲಿದೆ. ಬಿಡಿಎ ಮಾದರಿಯಲ್ಲಿ ಆಡಳಿತ ಮಂಡಳಿಯಲ್ಲಿ ಸದಸ್ಯರಲಿದ್ದಾರೆ.

ಆ ಮೂಲಕ ನಿವೇಶನ ಹಂಚಿಕೆ ಹಗರಣಗಳಿಂದ ಮುಳುಗಿರುವ ಮುಡಾಗೆ ಮೇಜರ್ ಸರ್ಜರಿ ಮಾಡಲಾಗಿದೆ. ಮುಡಾ ರದ್ದುಗೊಳಿಸಿ ಅದರ ಬದಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಲಿದೆ. ಬಿಡಿಎ ಮಾದರಿಯಲ್ಲಿ ಪ್ರಸ್ತಾವಿತ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಲಿದೆ. ಮುಡಾ ರದ್ದಾಗಿ ಅದರ ಎಲ್ಲಾ ಅಧಿಕಾರ, ಬಾಧ್ಯತೆ, ಹೊಣೆಗಾರಿಕೆ, ಆಸ್ತಿಗಳು ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆಯಾಗಲಿದೆ.‌

ಈ ಪ್ರಾಧಿಕಾರವು ಅಧ್ಯಕ್ಷರನ್ನು ಹೊಂದಿರಲಿದೆ. ಓರ್ವ ಹಣಕಾಸು ಸದಸ್ಯ, ಓರ್ವ ಇಂಜಿನಿಯರ್, ಒಬ್ಬ ಟೌನ್ ಪ್ಲಾನರ್, ವಾಸ್ತುಶಿಲ್ಪ ಅನುಭವ ಇರುವ ವ್ಯಕ್ತಿ, ಆಯುಕ್ತರು, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿ, ಇಬ್ಬರು ಶಾಸಕರು, ಕಾರ್ಯದರ್ಶಿ, ಎಸ್​ಸಿ, ಎಸ್​ಟಿ ಸಮುದಾಯದ ತಲಾ ಒಬ್ಬರು, ಮಹಿಳೆಯೊಬ್ಬರು ಸೇರಿ ನಾಲ್ವರು ಪ್ರಾಧಿಕಾರದ ಸದಸ್ಯರಾಗಿಲಿದ್ದಾರೆ. ಅಧ್ಯಕ್ಷರು ಹಾಗೂ ಸದಸ್ಯರ ಅವಧಿ ಮೂರು ವರ್ಷ ಇರಲಿದೆ.

ಇದನ್ನೂ ಓದಿ: ನಾವು ದೇವಸ್ಥಾನಗಳ 10,700 ಎಕರೆ ಜಮೀನು ರಕ್ಷಿಸಿದ್ದರೆ, ವಕ್ಫ್​​ದು ಕೇವಲ 600 ಎಕರೆ ಮಾತ್ರ ರಕ್ಷಣೆ: ಕೃಷ್ಣ ಬೈರೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.