ಅರ್ನಾಬ್ ಗೋಸ್ವಾಮಿ ಬಂಧನಕ್ಕೆ ಆಗ್ರಹಿಸಿ ಮಂಗಳೂರಿನಲ್ಲಿ ಎಸ್​ಡಿಪಿಐ ಪ್ರತಿಭಟನೆ - Pulwama attack

🎬 Watch Now: Feature Video

thumbnail

By

Published : Jan 21, 2021, 9:24 PM IST

ಮಂಗಳೂರು: ರಾಷ್ಟ್ರೀಯ ಭದ್ರತೆಗೆ ಅಪಾಯವನ್ನು ತಂದೊಡ್ಡಿದ ಅರ್ನಾಬ್ ಗೋಸ್ವಾಮಿಯನ್ನು ಜೈಲಿಗಟ್ಟಿ ಎಂದು ಎಸ್​ಡಿಪಿಐ ನಗರದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದೆ. ಈ ವೇಳೆ ಮಾತನಾಡಿದ ಎಸ್​ಡಿಪಿಐ ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಅರ್ನಾಬ್ ಗೋಸ್ವಾಮಿ ಟಿಆರ್​ಪಿ‌ ಹಗರಣದಲ್ಲಿ ಜೈಲುಪಾಲಾದ ಸಂದರ್ಭ ಮಾಜಿ‌ ಬಾರ್ಕ್ ಸಿಇಒ ಪಾರ್ಥೋದಾಸ್ ಗುಪ್ತ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ದೇಶದ ಭದ್ರತೆ ಹಾಗೂ ಸೂಕ್ಷ್ಮ ವಿಚಾರಗಳಾದ ಪುಲ್ವಾಮಾ ದಾಳಿಯ ಬಗೆಗಿನ ಮಾಹಿತಿಗಳು ಮೊದಲೇ ತಿಳಿಯುತ್ತದೆ. ಅಲ್ಲದೆ ಪುಲ್ವಾಮಾ ದಾಳಿಯಲ್ಲಿ 40 ಸೈನಿಕರು ಹುತಾತ್ಮರಾಗಿದ್ದನ್ನು ಭರ್ಜರಿಯಾಗಿ ಗೆದ್ದಿದ್ದೇವೆ ಎಂಬ ಸಂದೇಶ ರವಾನಿಸಲಾಗಿದೆ. ಈ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ಅರ್ನಾಬ್ ಗೋಸ್ವಾಮಿಯನ್ನು ತಕ್ಷಣ ಬಂಧಿಸುವಂತೆ ಪೊಲೀಸರಿಗೆ ಆದೇಶಿಸಲಿ ಎಂದು ಜಮಾಲ್ ಜೋಕಟ್ಟೆ ಆಗ್ರಹಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.