ಕೊರೊನಾ ಪರಿಣಾಮ: ಸಲೂನ್ಗಳ ರಜಾದಿನ ಬದಲಾಯಿಸಿದ ಸವಿತಾ ಸಮಾಜ - ಸಲೂನ್ಗಳ ಮೇಲೆ ಕೊರೊನಾ ಎಫೆಕ್ಟ್
🎬 Watch Now: Feature Video

ಕೊರೊನಾ ಲಾಕ್ಡೌನ್ ನಂತರ ಕೆಲವೊಂದು ಸಂಪ್ರದಾಯ ಪರಂಪರೆಗಳು ಕೂಡ ಬದಲಾವಣೆಯಾಗ್ತಿವೆ. ಅದರಲ್ಲೂ ಮುಖ್ಯವಾಗಿ ಕ್ಷೌರಿಕ ವ್ರತ್ತಿಯಲ್ಲಿ ಪ್ರತೀ ಮಂಗಳವಾರ ಸಲೂನ್ಗೆ ರಜೆ ನೀಡುವುದು ಪರಂಪರಾಗತವಾಗಿ ನಡೆದುಕೊಂಡು ಬಂದ ಪದ್ಧತಿ. ಹಿಂದೂ ಸಂಪ್ರದಾಯದ ಪ್ರಕಾರ, ಈ ದಿನ ಹೇರ್ ಕಟ್ ಮಾಡಿದ್ರೆ ಶನಿ ಹೆಗಲೇರುತ್ತೆ ಅನ್ನೋದು ವಾಡಿಕೆ. ಆದ್ರೆ, ಕೊರೊನಾ ಲಾಕ್ಡೌನ್ ಎಫೆಕ್ಟ್ನಿಂದಾಗಿ ಸವಿತಾ ಸಮಾಜ ಮಂಗಳವಾರದ ರಜಾ ದಿನವನ್ನು ಭಾನುವಾರಕ್ಕೆ ಶಿಫ್ಟ್ ಮಾಡಿದೆ. ಭಾನುವಾರ ರಜಾ ದಿನವಾದ್ದರಿಂದ ಸೋಶಿಯಲ್ ಡಿಸ್ಟೆನ್ಸ್ ನಿಯಮ ಪಾಲಿಸೋದು ಕಷ್ಟ. ಹೀಗಾಗಿ ಮಂಗಳವಾರ ಸಲೂನ್ ಓಪನ್ ಮಾಡಿ ಭಾನುವಾರವನ್ನು ಖಾಯಂ ಆಗಿ ರಜಾ ದಿನವನ್ನಾಗಿ ಘೋಷಿಸಲಾಗಿದೆ.