ತುಮಕೂರಲ್ಲಿ ಸವಿತಾ ಮಹರ್ಷಿ, ಮಡಿವಾಳ ಮಾಚಿದೇವ ಜಯಂತಿ ಆಚರಣೆ - ಸವಿತಾ ಸಮಾಜದ ಜಯಂತಿ
🎬 Watch Now: Feature Video
ತುಮಕೂರು: ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸವಿತಾ ಸಮಾಜದ ಸವಿತಾ ಮಹರ್ಷಿ ಜಯಂತಿ ಹಾಗೂ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಸವಿತಾ ಮತ್ತು ಮಡಿವಾಳ ಸಮಾಜಕ್ಕೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಸರ್ಕಾರದ ವತಿಯಿಂದ ಇವರ ಜಯಂತಿ ಮಾಡಲಾಗುತ್ತಿದೆ. ಅಲ್ಲದೇ, ಹಿರಿಯ ವಚನಕಾರರು ಮತ್ತು ಸಾಹಿತಿಕಾರರ ತತ್ವಗಳನ್ನ ನಾವು ಅಳವಡಿಸಿಕೊಂಡು ಅವರ ರೀತಿ ಜೀವನ ನಡೆಸಬೇಕು. 12ನೇ ಶತಮಾನದಲ್ಲಿ ವಚನಗಳ ಮೂಲಕ ಜನರಲ್ಲಿ ಅರಿವು ಮೂಡಿಸುವಂತಹ ಕಾರ್ಯವನ್ನ ಈ ಸಮಾಜದ ಸಾಹಿತಿ, ವಚನಕಾರರು ಮಾಡಿದ್ದರು. ಅಂತಹವರನ್ನ ಮತ್ತು ಅವರ ಸಮಾಜವನ್ನ ಮುಖ್ಯವಾಹಿನಿಗೆ ತರುವ ಉದ್ದೇಶ ಸರ್ಕಾರದ್ದಾಗಿದೆ ಎಂದರು.
Last Updated : Feb 1, 2020, 1:32 PM IST