ಹಂಪಿಯಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ: ತುಂಗಭದ್ರೆಯಲ್ಲಿ ಮಿಂದೆದ್ದು ಭಕ್ತರಲ್ಲಿ ಪುಳಕ - ಹಂಪಿಯಲ್ಲಿ ಸಂಕ್ರಾಂತಿ ಹಬ್ಬ
🎬 Watch Now: Feature Video
ಹೊಸಪೇಟೆ: ಐತಿಹಾಸಿಕ ಹಂಪಿಯ ತುಂಗಭದ್ರಾ ನದಿಯಲ್ಲಿ ಮಕರ ಸಂಕ್ರಾಂತಿ ದಿನದಿಂದು ಪುಣ್ಯಸ್ನಾನ ಮಾಡುವುದು ವಿಶೇಷ. ಈ ದಿನ ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ಸ್ಥಾನ ಪಲ್ಲಟ ಮಾಡುತ್ತಾನೆ. ಈ ವೇಳೆ ಪವಿತ್ರ ಸ್ನಾನ ಮಾಡಿದರೆ ಪಾಪಾದಿ ಕರ್ಮಗಳು ಕಳೆದು ಹೋಗುತ್ತವೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಅನೇಕ ಭಕ್ತರು ಹಂಪಿಯಲ್ಲಿರುವ ತುಂಗಭದ್ರಾ ನದಿಯಲ್ಲಿ ಮಿಂದೆದ್ದು ಪುನೀತರಾದರು ಎಂದು ಹಂಪಿ ದೇವಲಾಯದ ಅರ್ಚಕ ಮೋಹನ್ ಭಟ್ ತಿಳಿಸಿದರು.