ಸಕಲೇಶಪುರ.. ಚಲಿಸುತಿದ್ದ ಸಿಮೆಂಟ್ ತುಂಬಿದ ಲಾರಿಗೆ ಬೆಂಕಿ, ತಪ್ಪಿದ ಅನಾಹುತ - fire accident news
🎬 Watch Now: Feature Video
ಬೆಂಗಳೂರಿನಿಂದ ಮಂಗಳೂರು ಕಡೆಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯ ಚಕ್ರಗಳಿಗೆ ಬೆಂಕಿ ತಗುಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಸಕಲೇಶಪುರ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಚಲಿಸುತ್ತಿದ್ದ ಲಾರಿಯ ಚಕ್ರದ ಲೈನರ್‌ಗಳಿಗೆ, ಉಷ್ಣಾಂಶ ಹೆಚ್ಚಾದ ಕಾರಣ ಬೆಂಕಿ ತಗುಲಿರಬಹುದು ಎನ್ನಲಾಗಿದೆ. ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಸೂಕ್ತ ಸಮಯಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.