ಆಶಾ ಕಾರ್ಯಕರ್ತೆಯರಿಂದ ಗ್ಲೌಸ್-ಸ್ಯಾನಿಟೈಸ್ ವ್ಯವಸ್ಥೆ: ಬೂತ್ಗಳಲ್ಲಿ ಸುರಕ್ಷತೆ ಕುರಿತು ಗ್ರೌಂಡ್ ರಿಪೋರ್ಟ್ - ಬೆಂಗಳೂರು ಲೆಟೆಸ್ಟ್ ನ್ಯೂಸ್
🎬 Watch Now: Feature Video
ಬೆಂಗಳೂರು: ಆರ್ಆರ್ ನಗರ ವಿಧಾನಸಭಾ ಕ್ಷೇತ್ರದ ಮತದಾನ ಹಿನ್ನೆಲೆ, ಜೆಪಿ ಪಾರ್ಕ್ ವಾರ್ಡ್ನ ಬಿಬಿಎಂಪಿ ಕಚೇರಿಯಲ್ಲಿ ಮತದಾನ ಆರಂಭವಾಗಿದೆ. ಬೂತ್ಗೆ ಒಬ್ಬರಂತೆ ಮೂರು ಬೂತ್ಗೆ ಮೂವರು ಆಶಾ ಕಾರ್ಯಕರ್ತೆಯರನ್ನು ನಿಯೋಜನೆ ಮಾಡಲಾಗಿದೆ. ಮತದಾನ ಮಾಡಲು ಬರುವ ಮತದಾರರಿಗೆ ಸುರಕ್ಷತೆಯ ದೃಷ್ಟಿಯಿಂದ ಗ್ಲೌಸ್ ಹಾಗೂ ಮಾಸ್ಕ್ ನೀಡುತ್ತಿದ್ದಾರೆ. ಜೊತೆಗೆ, ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನ ಮಾಡುವಂತೆ ಪೊಲೀಸರಿಂದ ಸೂಚನೆ ನೀಡಲಾಗುತ್ತಿದೆ. ಒಟ್ಟಾರೆ ಸಂಪೂರ್ಣ ಸುರಕ್ಷತಾ ನಿಯಮಗಳನ್ನು ಕೈಗೊಳ್ಳಲಾಗಿದೆ.