ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರ ಬಲಿದಾನ ನಿತ್ಯ ಸ್ಮರಣೀಯ.. - Kargil Vijay Day
🎬 Watch Now: Feature Video

ಮುದ್ದೇಬಿಹಾಳ : ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರ ಬಲಿದಾನ ನಿತ್ಯವೂ ಸ್ಮರಣೀಯ ಎಂದು ಸಿಪಿಐ ಆನಂದ ವಾಘಮೋಡೆ ಹೇಳಿದರು. ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಸೈನಿಕ ಮೈದಾನದ ಕಾರ್ಗಿಲ್ ಹುತಾತ್ಮ ಯೋಧ ದಾವಲಸಾಬ್ ಕಂಬಾರ ಅವರ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ್ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 21 ವರ್ಷಗಳ ಹಿಂದೆ ಕಾರ್ಗಿಲ್‌ನಲ್ಲಿ ಜೀವ ಪಣಕ್ಕಿಟ್ಟು ಹೋರಾಟ ಮಾಡಿದ ಸೈನಿಕರು ಭಾರತಕ್ಕೆ ವಿಜಯ ತಂದಿತ್ತ ಕೀರ್ತಿ ಎಂದಿಗೂ ಮರೆಯಲಾರದ ಸಂಗತಿ. ಹುತಾತ್ಮ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ಮಾರಕ ನಿರ್ಮಾಣ ಸಮಿತಿ ಅಧ್ಯಕ್ಷ ಕಿರಣ ಪಾಟೀಲ, ಉಪಾಧ್ಯಕ್ಷ ಚಂದ್ರಶೇಖರ ಕಲಾಲ, ಹುತಾತ್ಮ ಯೋಧ ದಾವಲಸಾಬ ಕಂಬಾರ ಸಹೋದರ ಲಾಡಸಾಬ್ ಕಂಬಾರ ಸೇರಿ ಮತ್ತಿತರರಿದ್ದರು.
Last Updated : Jul 26, 2020, 11:09 PM IST