ಹುಬ್ಬಳ್ಳಿ: 48 ಮರಿಗಳಿಗೆ ಜನ್ಮ ನೀಡಿದ ಕೊಳಕು ಮಂಡಲ ಹಾವು..! - Hubballi news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7421988-thumbnail-3x2-vish.jpg)
ಹುಬ್ಬಳ್ಳಿ: ಕೊಳಕು ಮಂಡಲ (ರಸಲ್ ವೈಫರ್) ಹಾವೊಂದು 48 ಮರಿಗಳಿಗೆ ಜನ್ಮ ನೀಡಿದ ಘಟನೆ ನಗರದಲ್ಲಿ ನಡೆದಿದೆ. ತಲೆಗೆ ಪೆಟ್ಟು ಬಿದ್ದು ಗಾಯಗೊಂಡಿದ್ದ ಈ ಹಾವನ್ನು ಸ್ನೇಕ್ ಸಂಗಮೇಶ್ ರಕ್ಷಿಸಿದ್ದರು. ಎರಡು ದಿನದ ನಂತರ ಕಾಡಿಗೆ ಬಿಡುವ ವೇಳೆ ಈ ಹಾವು ಸುಮಾರು 48 ಮರಿಗಳಿಗೆ ಜನ್ಮ ನೀಡಿದೆ. ಇದು ಎಲ್ಲ ಹಾವುಗಳಂತೆ ಮೊಟ್ಟೆಯನ್ನು ಇಡುವುದಿಲ್ಲ. ಅದು ಗರ್ಭದಲ್ಲಿ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಗಳಿಗೆ ಜನ್ಮ ನೀಡುವುದು ಈ ಹಾವಿನ ವಿಶೇಷ ಎನ್ನುತ್ತಾರೆ ಸ್ನೇಕ್ ಸಂಗಮೇಶ.