ಈಗ ಹಳ್ಳಿ ಹಳ್ಳಿಯಲ್ಲೂ ವರದಿಗಾರರದ್ದೇ ಹವಾ: ಈ ಗ್ರಾಮದ ಸಮಸ್ಯೆ ಹಿಂಗೈತಿ ನೋಡ್ರಿ- ವಿಡಿಯೋ - kannad news
🎬 Watch Now: Feature Video

ಧಾರವಾಡ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಗೆ ಎಲ್ಲಿ ನೋಡಿದ್ರೂ ಬರೀ ನೀರೇ ಕಾಣ್ತಿದೆ. ಎಡೆಬಿಡೆದೆ ಸುರಿಯುತ್ತಿರುವ ಮಳೆ ರಾದ್ಧಾಂತಗಳ ಜೊತೆಗೆ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹುಟ್ಟು ಹಾಕಿದೆ. ಹೌದು, ಮಳೆ ಹಳ್ಳಿ ಹಳ್ಳಿಯಲ್ಲೂ ವರದಿಗಾರರನ್ನು ಸೃಷ್ಟಿಸಿದೆ. ಅಲ್ಲಿನ ಜನರೇ ಸದ್ಯ ತಮ್ಮ ಸಮಸ್ಯೆ ಏನು ಅನ್ನೋದರ ಪ್ರತ್ಯಕ್ಷ ವರದಿಯನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಧಾರವಾಡ ತಾಲೂಕಿನ ಕಲ್ಲಾಪುರ ಗ್ರಾಮದ ಹುಡುಗನೋರ್ವನ ವಾಕ್ ಥ್ರೂ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ