ಆಸ್ಪತ್ರೆ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಅಪಪ್ರಚಾರ.. ಸೈಬರ್ ಪೊಲೀಸರಿಗೆ ದೂರು - Rumers about the hospital in WhatsApp in Mangaluru
🎬 Watch Now: Feature Video
ಮಂಗಳೂರು: ಹಣ ನೀಡದಕ್ಕೆ ನಗರದ ಇಂಡಿಯಾನ ಆಸ್ಪತ್ರೆ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಅಪಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಆಸ್ಪತ್ರೆ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಯೂಸುಫ್ ಎ ಕುಂಬ್ಳೆ ಮಾಹಿತಿ ನೀಡಿ, ರೋಗಿಗೆ ಸಹಾಯ ಮಾಡಲು ಒಂದು ಲಕ್ಷ ರೂ. ನೀಡುವಂತೆ ಎರಡು ಇಂಟರ್ನೆಟ್ ಕರೆ ಬಂದಿತ್ತು. ಬೇಡಿಕೆ ನಿರಾಕರಿಸಿದ್ದಕ್ಕೆ ಆಸ್ಪತ್ರೆ ಬಗ್ಗೆ ಅಪಪ್ರಚಾರ ಮಾಡುವ ಬೆದರಿಕೆ ಹಾಕಲಾಗಿತ್ತು. ಇತ್ತೀಚೆಗೆ ವಾಟ್ಸ್‌ಆ್ಯಪ್‌ನಲ್ಲಿ ಇಂಡಿಯಾನ ಆಸ್ಪತ್ರೆ ಬಗ್ಗೆ ಅಪಪ್ರಚಾರ ಆರಂಭವಾಗಿದೆ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದರು.
TAGGED:
ವಾಟ್ಸಾಪಿನಲ್ಲಿ ಅಪಪ್ರಚಾರ