ಬೆಂಗಳೂರಲ್ಲಿ ರಾಬರ್ಸ್ ಗ್ಯಾಂಗ್ ಹಾವಳಿ: ಯುವತಿ ಕೈಯಿಂದ ಮೊಬೈಲ್ ಕಸಿದು ಖದೀಮರು ಪರಾರಿ - ಯುವತಿ ಕೈಯಿಂದ ಮೊಬೈಲ್ ಕಸಿದು ಖದೀಮರು ಪರಾರಿ

🎬 Watch Now: Feature Video

thumbnail

By

Published : Nov 2, 2020, 7:47 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ದರೋಡೆಕೋರರ ಹಾವಳಿ ಹೆಚ್ಚಾಗಿದೆ. ನಿನ್ನೆ ರಾತ್ರಿ ವೇಳೆ ಬಸ್​ಗಾಗಿ ಕಾಯುತ್ತಿದ್ದ ಯುವತಿಯ ಕೈಯಿಂದ ಮೊಬೈಲ್ ಫೋನ್​ ಕಸಿದು ಖದೀಮರು ಪರಾರಿಯಾಗಿದ್ದಾರೆ. ಅಂಜಲಿ ಎಂಬಾಕೆ ಕಲ್ಯಾಣ್ ನಗರ ಬಸ್ ನಿಲ್ದಾಣದ್ ಬಳಿ ಬಿಎಂಟಿಸಿ ಬಸ್​ಗಾಗಿ ಕಾಯುತ್ತಿದ್ದರು. ಈ ವೇಳೆ ಬಸ್​ ನಿಲ್ದಾಣ ಬಳಿ ಯಾರು ಇಲ್ಲದ ಸಂದರ್ಭದಲ್ಲಿ ಬೈಕ್​ನಲ್ಲಿ ಬಂದ ಖದೀಮರು ಮೊಬೈಲ್ ಕಸಿದುಕೊಂಡು ಎಸ್ಕೇಪ್ ಆಗಿದ್ದಾರೆ. ಯುವತಿ ಕಿರುಚಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಸಂಬಂಧ ‌ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ಆಧಾರದ ಮೇಲೆ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.