ETV Bharat / state

ಬೆಂಗಳೂರಿನಲ್ಲಿ ಈ ವರ್ಷ ಡ್ರಗ್ಸ್ ಘಾಟು ಕೊಂಚ ಇಳಿಸಿದ ಪೊಲೀಸರು: ₹95 ಕೋಟಿ ಮೌಲ್ಯದ ತರಹೇವಾರಿ ಡ್ರಗ್ಸ್ ಜಪ್ತಿ - DRUGS SEIZED IN BENGALURU CITY

ಈ ವರ್ಷದ ಡಿಸೆಂಬರ್ 22ರ ಅಂತ್ಯಕ್ಕೆ ಒಟ್ಟು 479 ಪ್ರಕರಣಗಳನ್ನು ದಾಖಲಿಸಿ ಸುಮಾರು 95 ಕೋಟಿ ರೂ. ಮೌಲ್ಯದ 1,862 ಕೆ.ಜಿ ವಿವಿಧ ಮಾದಕವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು 655 ದಂಧೆಕೋರರನ್ನು ಬಂಧಿಸಿದ್ದಾರೆ.

drugs seized in Bengaluru city this year
ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಘಾಟು (ETV Bharat)
author img

By ETV Bharat Karnataka Team

Published : 16 hours ago

Updated : 16 hours ago

ಬೆಂಗಳೂರು: ಐಟಿ-ಬಿಟಿ ಹಬ್, ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಡ್ರಗ್ಸ್ ಘಾಟು ಕೊಂಚ ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ಮಾದಕವಸ್ತುಗಳ ಮಾರಾಟ ಜಾಲ ಹರಡುತ್ತಿದ್ದು, ಪೊಲೀಸರು ಕೈಗೊಂಡ ವಿಶೇಷ ಕಾರ್ಯಾಚರಣೆಗಳ ಫಲವಾಗಿ 2024ರಲ್ಲಿ ಡ್ರಗ್ಸ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಡಗ್ಸ್ ನಿರ್ಮೂಲನೆಗಾಗಿ ನಗರ ಪೊಲೀಸರು ಸಮರವನ್ನೇ ಸಾರಿದ್ದು ಸುಮಾರು 95 ಕೋಟಿ ರೂ ಮೌಲ್ಯದ ತರಹೇವಾರಿ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಈ ವರ್ಷದ ಡಿಸೆಂಬರ್ 22 ಅಂತ್ಯಕ್ಕೆ ಒಟ್ಟು 479 ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ಸುಮಾರು 95 ಕೋಟಿ ರೂ. ಮೌಲ್ಯದ 1,862 ಕೆ.ಜಿ ವಿವಿಧ ಮಾದಕವಸ್ತುಗಳನ್ನು ವಶಕ್ಕೆ ಪಡೆದು 655 ಮಂದಿ ದಂಧೆಕೋರರನ್ನು ಬಂಧಿಸಿದ್ದಾರೆ. ಕಳೆದ ವರ್ಷ 3,433 ಪ್ರಕರಣಗಳನ್ನು ದಾಖಲಿಸಿ 4,399 ಮಂದಿಯನ್ನು ಬಂಧಿಸಿ ಸುಮಾರು 103 ಕೋಟಿ ಮೌಲ್ಯದ 5,387 ಕೆ.ಜಿ ಡ್ರಗ್ಸ್ ವಶಕ್ಕೆ ಪಡೆದಿದ್ದರು.

Information about drugs seized by police this year
ಈ ವರ್ಷ ಪೊಲೀಸರು ವಶಪಡಿಸಿಕೊಂಡ ಡ್ರಗ್ಸ್​ ಕುರಿತು ಮಾಹಿತಿ (ETV Bharat Graphics)

ಕಳೆದ ವರ್ಷಕ್ಕಿಂತ 2024ರಲ್ಲಿ ಗಾಂಜಾ, ಬ್ರೌನ್ ಶುಗರ್, ಅಫೀಮು, ಹೆರಾಯಿನ್ ಜೊತೆ ಸಿಂಥೆಟಿಕ್ ಡ್ರಗ್ಸ್ ಮಾರಾಟ ಪ್ರಮಾಣ ತುಸು ಇಳಿಕೆಯಾಗಿದೆ. ಡ್ರಗ್ಸ್​ ಮಾರಾಟ ಜಾಲದಲ್ಲಿ ತೊಡಗಿದ್ದವರನ್ನು ಬಂಧಿಸಿದರೆ ಡ್ರಗ್ಸ್ ಸೇವಿಸುತ್ತಿದ್ದವರನ್ನು ಈ ಬಾರಿ ಬಂಧಿಸದ ಕಾರಣ ಬಂಧಿತರ ಸಂಖ್ಯೆ ಕಡಿಮೆಯಾಗಿದೆ ಎಂದು ಪೊಲೀಸ್​ ಇಲಾಖೆ ನೀಡಿದ ಅಂಕಿ-ಅಂಶಗಳು ಪುಷ್ಟೀಕರಿಸಿವೆ.

ಗಾಂಜಾ ಘಾಟು ಜೊತೆಗೆ ಸಿಂಥೆಟಿಕ್ ಡ್ರಗ್ಸ್ ಹೆಚ್ಚಳ: ಮಾದಕವಸ್ತು ಮಾರಾಟ ಜಾಲ ಪ್ರಕರಣದಲ್ಲಿ ಬಂಧಿತರಿಂದ ಹೆಚ್ಚಾಗಿ ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಎಂಡಿಎಎ ವಶಕ್ಕೆ ಪಡೆದುಕೊಳ್ಳಲಾಗಿದೆ. 337 ಗಾಂಜಾ ಮಾರಾಟ ಪ್ರಕರಣಗಳಲ್ಲಿ 471 ದಂಧೆಕೋರರನ್ನು ಬಂಧಿಸಿ ಅವರಿಂದ 20.67 ಕೋಟಿ ಮೌಲ್ಯದ 1,790 ಕೆ.ಜಿ ಗಾಂಜಾ ಹಾಗೂ 92 ಎಂಡಿಎಂಎ ಸಾಗಾಟ ಪ್ರಕರಣದಲ್ಲಿ 128 ಮಂದಿಯನ್ನು ಬಂಧಿಸಿ ಸುಮಾರು 49.83 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಳ್ಳುವಲ್ಲಿ ರಾಜಧಾನಿ ಪೊಲೀಸರು ಸಫಲರಾಗಿದ್ದಾರೆ.

"ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ನಿರ್ಮೂಲನೆಗಾಗಿ ಪಣ ತೊಟ್ಟಿರುವ ಪೊಲೀಸರು ಬೆಂಗಳೂರು ನಗರಕ್ಕೆ ಸರಬರಾಜಾಗುವ ಸ್ಥಳಗಳ ಮೇಲೆ ನಿಗಾವಹಿಸಿದ್ದ ಪರಿಣಾಮ ದೊಡ್ಡ ಮಟ್ಟದಲ್ಲಿ ಕಿಕ್ ಏರಿಸುವ ಡ್ರಗ್ಸ್ ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಆಂಧ್ರ, ತೆಲಂಗಾಣ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಿಂದ ನಿರಂತರವಾಗಿ ಬೆಂಗಳೂರಿಗೆ ಗಾಂಜಾ ಸರಬರಾಜಾಗುತ್ತಿದೆ. ಕಡಿಮೆ ಬೆಲೆಗೆ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆಕೋರರು ಹೆಚ್ಚಾಗಿ ಶಾಲಾ-ಕಾಲೇಜುಗಳ ಮುಂದೆ ಮಾರಾಟ ಮಾಡುವುದನ್ನು ಗುರಿಯಾಗಿಸಿಕೊಂಡಿದ್ದಾರೆ. ಇನ್ನೂ ಅಧಿಕ ಬೆಲೆಯ ಸಿಂಥೆಟಿಕ್ ಡ್ರಗ್ಸ್​ ದೆಹಲಿ ಹಾಗೂ ಮುಂಬೈನಿಂದ ನಗರಕ್ಕೆ ಬರುತ್ತಿದ್ದು, ಐಟಿ ಬಿಟಿ ಉದ್ಯೋಗಿಗಳನ್ನು ಟಾರ್ಗೆಟ್ ಮಾಡಿಕೊಂಡು ಮಾರಾಟ ಮಾಡಲಾಗುತ್ತಿದೆ. ನಿರಂತರ ಜಾಗೃತಿ ಹಾಗೂ ಡ್ರಗ್ಸ್ ಪಿಡುಗಿನ ವಿರುದ್ಧ ಕಾರ್ಯಾಚರಣೆ ಕೈಗೊಂಡ ಪರಿಣಾಮ ತಕ್ಕಮಟ್ಟಿಗೆ ತಹಬದಿಗೆ ತರಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಿನಸಿ ಪದಾರ್ಥಗಳಲ್ಲಿ ಡ್ರಗ್ಸ್ ಸಾಗಾಟ: ಪೊಲೀಸರನ್ನು ಯಾಮಾರಿಸಲು ವಿವಿಧ ತಂತ್ರಗಳನ್ನು ಅನುಸರಿಸುವ ದಂಧೆಕೋರರು ಯಾರಿಗೂ ಅನುಮಾನ ಬಾರದಿರಲು ದೆಹಲಿ ಹಾಗೂ ಮುಂಬೈ ಸೇರಿದಂತೆ ದೇಶದ ನಾನಾ ಕಡೆಗಳಿಂದ ಸಿಂಥೆಟಿಕ್ ಡ್ರಗ್ಸ್ ಇಟ್ಟು ರಾಜಧಾನಿಗೆ ಸರಬರಾಜು ಮಾಡುತ್ತಿದ್ದಾರೆ. ಸೋಪು, ಬೇಳೆ ಸೇರಿದಂತೆ ಇನ್ನಿತರ ದಿನಸಿ ಆಹಾರ ಪದಾರ್ಥಗಳ ಪ್ಯಾಕೆಟ್​ಗಳಲ್ಲಿಟ್ಟು ಸಪ್ಲೈ ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಡ್ರಗ್ಸ್ ಸಾಗಾಟ ಮಾಡಿದ್ದ ವಿದೇಶಿ ಮಹಿಳೆಯನ್ನು ಬಂಧಿಸಿ 24 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿತ್ತು. ಈ ಜಾಲದಲ್ಲಿ ತೊಡಗಿಸಿಕೊಳ್ಳುವ ಬಹುತೇಕರು ನೈಜೀರಿಯಾ ಸೇರಿದಂತೆ ಅಫ್ರಿಕಾ ಮೂಲದವರೇ ಹೆಚ್ಚಾಗಿದ್ದು, ವಶಪಡಿಸಿಕೊಳ್ಳಲಾದ 95 ಕೋಟಿ ರೂ. ಮೌಲ್ಯದ ಡ್ರಗ್ಸ್ ಪೈಕಿ ಸುಮಾರು 70 ಕೋಟಿ ರೂ. ಮೌಲ್ಯದ ಡ್ರಗ್ಸ್​ ಅನ್ನು ಸಿಸಿಬಿಯೇ ಜಪ್ತಿ ಮಾಡಿಕೊಂಡಿದೆ" ಹಿರಿಯ ಅಧಿಕಾರಿಗಳು ತಿಳಿಸಿದ್ಧಾರೆ.

ಪೊಲೀಸರು ಮಾಡಬೇಕಾದದ್ದೇನು?: ವೀಸಾ ಅವಧಿ ಮುಗಿದರೂ ನಗರದಲ್ಲಿ ನೆಲೆಯೂರಿ ದಂಧೆಯಲ್ಲಿ ಭಾಗಿಯಾಗಿರುವ ವಿದೇಶಿ ಪ್ರಜೆಗಳನ್ನು ತ್ವರಿತ ಗಡಿಪಾರಿಗೆ ಕ್ರಮ ಕೈಗೊಳ್ಳಬೇಕು. ಅವ್ಯಾಹತವಾಗಿ ಸರಬರಾಜು ಮಾಡುವ ದಂಧೆಕೋರರ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿತರಾಗಿ ಜೈಲು ಸೇರಿ ಬಿಡುಗಡೆಯಾಗುವ ಆರೋಪಿಗಳ ಮೇಲೆ ಹದ್ದಿನ ಕಣ್ಣಿಡಬೇಕಿದೆ. ಶಾಲಾ, ಕಾಲೇಜು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಡ್ರಗ್ಸ್ ಮಾರಾಟ ಜಾಲದ ಅಡ್ಡೆ ಮೇಲೆ ನಿರಂತರವಾಗಿ ಕಾರ್ಯಾಚರಣೆ ನಡೆಸಬೇಕಿದೆ. ಸಾರ್ವಜನಿಕರು ದಂಧೆ ಬಗ್ಗೆ ತಿಳಿದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅಲ್ಲದೆ ಪೊಲೀಸ್ ಇಲಾಖೆ ಅಭಿವೃದ್ಧಿಪಡಿಸಿರುವ Drug Free Karnataka ಆ್ಯಪ್​ನಲ್ಲಿಯೂ (ಆ್ಯಪ್​ ಲಿಂಕ್​- https://play.google.com/store/apps/details?id=in.gov.drugfreekarnataka) ಡ್ರಗ್ಸ್​ ದಂಧೆ ಬಗ್ಗೆ ಮಾಹಿತಿ ನೀಡಬಹುದು.

ಇದನ್ನೂ ಓದಿ: ಬೆಂಗಳೂರಿಗೆ ಸೋಪು, ಬೇಳೆ ಪ್ಯಾಕೆಟ್​ಗಳಲ್ಲಿ ಡ್ರಗ್ಸ್ ಸಾಗಣೆ: ₹24 ಕೋಟಿಯ ಎಂಡಿಎಂಎ ವಶ, ವಿದೇಶಿ ಮಹಿಳೆ ಅರೆಸ್ಟ್

Last Updated : 16 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.