ETV Bharat / state

ಧಾರವಾಡ: ಪೊಲೀಸರ ಮೇಲೆ ಹಲ್ಲೆ, ಮನೆ ದರೋಡೆ ಪ್ರಕರಣದ ಆರೋಪಿಯ 2 ಕಾಲಿಗೂ ಗುಂಡೇಟು! - POLICE SHOOT ACCUSED IN THE LEG

ಮನೆ ದರೋಡೆ ಪ್ರಕರಣದ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಕೊಂಡೊಯ್ಯುವಾಗ ಪೊಲೀಸರ ಮೇಲೆ ದಾಳಿ ಮಾಡಿದ್ದು, ಸ್ವಯಂ ರಕ್ಷಣೆಗಾಗಿ ಆತನ ಎರಡೂ ಕಾಲಿಗೂ ಗುಂಡು ಹಾರಿಸಲಾಗಿದೆ.

DHARWAD  HOUSE ROBBERY CASE  ACCUSED ASSAULTED THE OFFICER  ಆರೋಪಿ ಕಾಲಿಗೆ ಗುಂಡೇಟು
ಪೊಲೀಸರ ಮೇಲೆ ಹಲ್ಲೆ: ಮನೆ ದರೋಡೆ ಪ್ರಕರಣ ಆರೋಪಿ ಕಾಲಿಗೆ ಗುಂಡೇಟು! (ETV Bharat)
author img

By ETV Bharat Karnataka Team

Published : Dec 28, 2024, 11:24 AM IST

ಹುಬ್ಬಳ್ಳಿ (ಧಾರವಾಡ): ಧಾರವಾಡ ನವಲೂರಿನಲ್ಲಿ ರಾತ್ರೋರಾತ್ರಿ ಮನೆಗೆ ನುಗ್ಗಿ ಮನೆ ದರೋಡೆಗೆ ಪ್ರಯತ್ನಿಸಿ, ಮನೆಯವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಅಂತರರಾಜ್ಯ ನಟೋರಿಯಸ್ ದರೋಡೆಕೋರನ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದರಲ್ಲಿ ಪೊಲೀಸ್​​ ಸಿಬ್ಬಂದಿಗೂ ಗಾಯಗಳಾಗಿವೆ.

ಈ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ‌ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಕಮಿಷನರ್​ ಎನ್.ಶಶಿಕುಮಾರ್ ಅವರು, "ಧಾರವಾಡದ ನವಲೂರಿನ ಹೊರವಲಯದಲ್ಲಿರುವ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ವಿಕಾಸ್​ ಕುಮಾರ್ ಎಂಬುವವರ ಮನೆಗೆ ರಾತ್ರೋರಾತ್ರಿ ದರೋಡೆಕೋರರು ದರೋಡೆಗೆ ಯತ್ನಿಸಿದ್ದಾರೆ. ಘಟನೆ ನಡೆದ ಕೂಡಲೇ ರೌಂಡ್ಸ್​​ನಲ್ಲಿದ್ದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದಾರೆ. ಆರೋಪಿ ಪಾಲಾ ವೆಂಕಟೇಶ್ವರ ಅಲಿಯಾಸ್ ಕಲ್ಯಾಣ ಕುಮಾರ್ ಎಂಬಾತ ಸೆರೆ ಸಿಕ್ಕಿದ್ದಾನೆ. ‌ವಿಚಾರಣೆ ವೇಳೆ ಇನ್ನೂ ಮೂರ್ನಾಲ್ಕು ಜನ ಆತನೊಂದಿಗೆ ಬಂದಿದ್ದಾರೆ ಎಂಬುದನ್ನು ಆರೋಪಿ ತಿಳಿಸಿದ್ದಾನೆ" ಎಂದರು.

ಪೊಲೀಸ್ ಕಮಿಷನರ್​ ಎನ್.ಶಶಿಕುಮಾರ್ ಮಾಹಿತಿ (ETV Bharat)

"ಇಲ್ಲಿನ ಇಂಡಸ್ಟ್ರಿಯಲ್ ಏರಿಯಾದ ಗಾರ್ಡನ್ ಸುತ್ತಮುತ್ತ‌ ಬೆಳಗಿನ ಜಾವದಲ್ಲಿ ಅವರು ಸೇರುವ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಲಾಗಿತ್ತು. ಈ ವೇಳೆ ಏಕಾಏಕಿ ಹಲ್ಲೆ ಮಾಡಲು ಬಂದು, ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟಿದ್ದ ದರೋಡೆಕೋರನ ಕಾಲಿಗೆ ಸ್ಥಳದಲ್ಲೇ ಇದ್ದ ಪಿಎಸ್ಐ ಪ್ರಮೋದ್ ಅವರು ಎರಡು ರೌಂಡ್ ಫೈರಿಂಗ್ ಮಾಡಿದ್ದರು. ಹೀಗಾಗಿ ಆತ ಸ್ಥಳದಲ್ಲೇ ಬಿದ್ದಿದ್ದಾನೆ ಅಲ್ಲಿಂದ ಕೂಡಲೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ" ಎಂದರು.

ಜೂನ್ 6 ರಂದು ಇದೇ ವ್ಯಕ್ತಿ ಅಶೋಕ ಕದಂಬರ ಮನೆಗೆ ನುಗ್ಗಿ ಬಾಗಿಲು ಹೊಡೆದು ಥಳಿಸಿದ್ದರು. ಮನೆಯಲ್ಲಿ ದಂಪತಿಗಳಿಗೂ ಕೂಡ ಹಲ್ಲೆ ಮಾಡಿದ್ದರು. ಅದೇ ಪ್ರಕರಣ ಆರೋಪಿ ಅನ್ನೋದು ಕೂಡ ಈಗ ತಿಳಿದು ಬಂದಿದೆ. ನಮ್ಮ ರಾಜ್ಯ ಸೇರಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ 50ಕ್ಕೂ ಹೆಚ್ಚು ಪ್ರಕರಣದಲ್ಲಿ ಈ ಆರೋಪಿ ಭಾಗಿಯಾಗಿದ್ದಾನೆ".

"ಈತನ ಮೇಲೆ ಆಂಧ್ರದ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಪ್ರಕರಣಗಳು ದಾಖಲಾಗಿವೆ. ಪಿಎಸ್ಐ ಪ್ರಮೋದ್ ಹಾಗೂ ಸಿಬ್ಬಂದಿ ಆನಂದ್ ಬಡಿಗೇರ ಅವರಿಗೆ ಸ್ವಲ್ಪ ಗಾಯವಾಗಿದೆ. ಬೇರೆ ಆರೋಪಿಗಳ ಬಗ್ಗೆ ವಿಚಾರಣೆ ಮಾಡಲಾಗಿದೆ. ಈತ ಮೂಲತಃ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯವನಾಗಿದ್ದಾನೆ. ಇವರು ವಂಶಾವಳಿಯಾಗಿ ದರೋಡೆಕೋರರಾಗಿದ್ದು, ಇವರ ಅಪ್ಪ, ಅಜ್ಜ ಸೇರಿ ಎಲ್ಲರೂ ಸಂಪೂರ್ಣ ಡಕಾಯಿತಿ ಮಾಡುತ್ತಿದ್ದರು" ಎಂದು ಕಮಿಷನರ್​ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಕಳ್ಳತನ‌ ಮಾಡುತ್ತಿದ್ದ ಮೂವರು ಅಕ್ಕ, ತಂಗಿಯರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.