ಹುಬ್ಬಳ್ಳಿಯಲ್ಲಿ ಹದಗೆಟ್ಟ ರಸ್ತೆ: ಮಳೆಯಾದ್ರೆ ಸಂಚಾರವಾಗುತ್ತೆ ದುಸ್ತರ - Hubballi Rain news 2020
🎬 Watch Now: Feature Video
ಹುಬ್ಬಳ್ಳಿ ನಗರದಲ್ಲಿ ಮಳೆಯಾದ್ರೆ ಸಾಕು ಇಲ್ಲಿನ ಹೃದಯ ಭಾಗ ಕಿಮ್ಸ್ ಎದುರುಗಿನ ಜಯನಗರದ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡು ಹಲವಾರು ಅನಾಹುತಕ್ಕೆ ದಾರಿಯಾಗುತ್ತಿದೆ. ಸಿಕ್ಕ ಸಿಕ್ಕಲ್ಲಿ ಬಿದ್ದಿರುವ ಗುಂಡಿಗಳಿಂದ ರಸ್ತೆ ಮೇಲೆ ಓಡಾಡುವ ಮಕ್ಕಳು ಹಾಗೂ ನಿವಾಸಿಗಳು ಅದೆಷ್ಟೋ ಬಾರಿ ಬಿದ್ದಿರುವ ಉದಾಹರಣೆಗಳಿವೆ. ಅಲ್ಲದೇ, ನಿತ್ಯ ಕಿಮ್ಸ್ ಆಸ್ಪತ್ರೆ ಕೊರ್ಟ್ಗೆ ಈ ರಸ್ತೆಯ ಮಾರ್ಗವಾಗಿ ಹೋಗುವವರು ಜೀವ ಕೈಯಲ್ಲಿ ಹಿಡಿದು ಹೋಗಬೇಕಾದ ಪ್ರಸಂಗ ಬಂದೊದಗಿದೆ.