ETV Bharat / state

ಶಿಕ್ಷಣದ ವಾರ್ಷಿಕ ಸ್ಥಿತಿಗತಿ ವರದಿ -2024: ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ - STATUS OF EDUCATION REPORT

ಶಿಕ್ಷಣದ ವಾರ್ಷಿಕ ಸ್ಥಿತಿಗತಿ ವರದಿಯ ಮಾಹಿತಿ ಇಲ್ಲಿದೆ.

ಶಿಕ್ಷಣದ ವಾರ್ಷಿಕ ಸ್ಥಿತಿಗತಿ ವರದಿ-2024: ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ
ಶಿಕ್ಷಣದ ವಾರ್ಷಿಕ ಸ್ಥಿತಿಗತಿ ವರದಿ-2024: ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ (ians)
author img

By ETV Bharat Karnataka Team

Published : Jan 30, 2025, 8:00 PM IST

ಶಿಕ್ಷಣದ ವಾರ್ಷಿಕ ಸ್ಥಿತಿಗತಿ ವರದಿ (ಎಎಸ್ಇಆರ್) 2024 ರಾಷ್ಟ್ರವ್ಯಾಪಿ ಗ್ರಾಮೀಣ ಕುಟುಂಬ ಸಮೀಕ್ಷೆಯಾಗಿದ್ದು, ಭಾರತದ 605 ಗ್ರಾಮೀಣ ಜಿಲ್ಲೆಗಳ 17,997 ಹಳ್ಳಿಗಳ 6,49,491 ಮಕ್ಕಳನ್ನು ಒಳಗೊಂಡು ಈ ಸಮೀಕ್ಷೆ ನಡೆಸಲಾಗಿದೆ. ಪ್ರಥಮ್ ಸಂಘಟನೆಯ ನೆರವಿನೊಂದಿಗೆ, ಪ್ರತಿ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಯು ಈ ಸಮೀಕ್ಷೆ ನಡೆಸಿದೆ.

ಭಾರತದಲ್ಲಿ 14 -16 ವರ್ಷ ವಯಸ್ಸಿನ ಶೇ 82ಕ್ಕೂ ಹೆಚ್ಚು ಮಕ್ಕಳಿಗೆ ಸ್ಮಾರ್ಟ್​ಫೋನ್ ಹೇಗೆ ಬಳಸಬೇಕೆಂಬುದು ತಿಳಿದಿದೆ. ಆದರೆ ಅವರಲ್ಲಿ ಕೇವಲ ಶೇ 57 ರಷ್ಟು ಮಕ್ಕಳು ಮಾತ್ರ ಅವುಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸುತ್ತಾರೆ. ಇನ್ನು ಶೇ 76 ರಷ್ಟು ಮಕ್ಕಳು ಸಾಮಾಜಿಕ ಮಾಧ್ಯಮ ನೋಡಲು ಸ್ಮಾರ್ಟ್​​ಫೋನ್ ಬಳಸುತ್ತಾರೆ ಎಂದು ವಾರ್ಷಿಕ ಶಿಕ್ಷಣ ಸ್ಥಿತಿ ವರದಿ (ಎಎಸ್ಇಆರ್) 2024 ತಿಳಿಸಿದೆ.

ಸಮೀಕ್ಷೆಯ ಕರ್ನಾಟಕ ಕುರಿತಾದ ಮುಖ್ಯಾಂಶಗಳು: ಎಎಸ್ಇಆರ್ ಪ್ರಕಾರ, ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 6-14 ವರ್ಷ ವಯಸ್ಸಿನ ಮಕ್ಕಳ ದಾಖಲಾತಿಯಲ್ಲಿ ಕುಸಿತ ಕಂಡು ಬಂದಿದೆ. ಇದು 2022 ರಲ್ಲಿ ಇದ್ದ ಶೇಕಡಾ 76 ರಿಂದ 2024 ರಲ್ಲಿ ಶೇಕಡಾ 71 ಕ್ಕೆ ಇಳಿದಿದೆ. ಆದಾಗ್ಯೂ, ದಾಖಲಾತಿ ಪ್ರಮಾಣವು 2018ರಲ್ಲಿ ಇದ್ದ ಶೇಕಡಾ 69 ಕ್ಕೆ ಹೋಲಿಸಿದರೆ ಈ ಅಂಕಿ - ಅಂಶವು ಈಗಲೂ ಹೆಚ್ಚಾಗಿದೆ. ರಾಜ್ಯದ ಶೇ 83ರಷ್ಟು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 60ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ, ಶೇ 22ರಷ್ಟು ಹಿರಿಯ ಪ್ರಾಥಮಿಕ ಅಥವಾ ಪ್ರೌಢಶಾಲೆಗಳಲ್ಲಿ 60ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಆದಾಗ್ಯೂ, ಇದು 2022 ರಿಂದ ಶೇಕಡಾ 17 ರಷ್ಟು ಹೆಚ್ಚಳವಾಗಿದೆ.

ಕರ್ನಾಟಕದಲ್ಲಿ ಡಿಜಿಟಲ್ ಸಾಕ್ಷರತೆ ಮತ್ತು ಸ್ಮಾರ್ಟ್ ಫೋನ್ ಬಳಕೆ

  • ರಾಷ್ಟ್ರೀಯವಾಗಿ ಶೇ 90ರಷ್ಟು ಮತ್ತು ಕರ್ನಾಟಕದಲ್ಲಿ ಶೇ 94.5 ರಷ್ಟು 14-16ರ ವಯಸ್ಸಿನ ಮಕ್ಕಳನ್ನು ಹೊಂದಿರುವ ಕುಟುಂಬಗಳು ಸ್ಮಾರ್ಟ್ ಫೋನ್​​ಗಳನ್ನು ಹೊಂದಿವೆ.
  • ಕರ್ನಾಟಕದ ಶೇ 80.8 ರಷ್ಟು ಮಕ್ಕಳು ಸ್ಮಾರ್ಟ್​ಫೋನ್​ಗಳನ್ನು ಹೇಗೆ ಬಳಸಬೇಕು ಎಂದು ತಿಳಿದಿದ್ದಾರೆ. ಆದರೆ, ಕೇವಲ ಶೇ 64.4 ರಷ್ಟು ಮಕ್ಕಳು ಮಾತ್ರ ಅವುಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸುತ್ತಾರೆ.
  • ಶೇ 70.6ರಷ್ಟು ಮಕ್ಕಳು ಸಾಮಾಜಿಕ ಮಾಧ್ಯಮ ನೋಡಲು ಸ್ಮಾರ್ಟ್ ಫೋನ್​​ಗಳನ್ನು ಬಳಸುತ್ತಾರೆ.
  • 14 ರಿಂದ 15 ವರ್ಷ ವಯಸ್ಸಿನ ಶೇ 80 ಮಕ್ಕಳಿಗೆ ಸ್ಮಾರ್ಟ್​ಫೋನ್ ಹೇಗೆ ಬಳಸಬೇಕೆಂಬುದು ತಿಳಿದಿದ್ದರೂ, ಕೇವಲ ಶೇ 26ರಷ್ಟು ಮಕ್ಕಳ ಬಳಿ ಮಾತ್ರ ಫೋನ್​ಗಳಿವೆ.
  • ಈ ಮಕ್ಕಳಲ್ಲಿ ಶೇ 68ರಷ್ಟು ಮಕ್ಕಳು ಡಿಜಿಟಲ್ ಕಾರ್ಯಗಳಿಗಾಗಿ ಸ್ಮಾರ್ಟ್​ಫೋನ್ ಬಳಸುತ್ತಾರೆ.

ಕರ್ನಾಟಕದ ಮಕ್ಕಳಲ್ಲಿ ಓದುವ ಕೌಶಲ್ಯ: ಕರ್ನಾಟಕದಲ್ಲಿ 3 ನೇ ತರಗತಿಯ ಮಕ್ಕಳ ಪೈಕಿ ಶೇ 7.1 ರಷ್ಟು ಮಕ್ಕಳಿಗೆ ಅಕ್ಷರಗಳನ್ನು ಓದಲು ಬರುವುದಿಲ್ಲ. ಶೇ 19.3 ರಷ್ಟು ಮಕ್ಕಳು ಅಕ್ಷರಗಳನ್ನು ಓದಬಲ್ಲರು, ಆದರೆ, ಪದಗಳನ್ನು ಓದಲಾರರು. ಶೇ 36.2 ರಷ್ಟು ಮಕ್ಕಳು ಪದಗಳನ್ನು ಓದಬಲ್ಲರು. ಅವರು 1 ನೇ ತರಗತಿ ಮಟ್ಟದ ಪಠ್ಯ ಅಥವಾ ಅದಕ್ಕಿಂತ ಹೆಚ್ಚಿನದನ್ನು ಓದಲಾರರು. ಶೇ 4.8 ರಷ್ಟು ಮಕ್ಕಳು 1 ರಿಂದ 9 ರವರೆಗಿನ ಸಂಖ್ಯೆಗಳನ್ನು ಗುರುತಿಸಲಾರರು. ಶೇ 36.2ರಷ್ಟು ಮಕ್ಕಳು ಪದಗಳನ್ನು ಓದಬಲ್ಲರು, 1 ನೇ ತರಗತಿ ಮಟ್ಟದ ಪಠ್ಯವನ್ನು ಓದಲಾರರು. 5ನೇ ತರಗತಿಯ ಶೇ 32 ರಷ್ಟು ಸರಕಾರಿ ಶಾಲಾ ಮಕ್ಕಳು ಹಾಗೂ ಶೇ 37.8ರಷ್ಟು ಖಾಸಗಿ ಶಾಲಾ ಮಕ್ಕಳು ಮಾತ್ರ 2ನೇ ತರಗತಿಯ ಪಠ್ಯವನ್ನು ಓದಬಲ್ಲರು.

ಪಠ್ಯಪುಸ್ತಕ ಓದಬಲ್ಲ ವಿದ್ಯಾರ್ಥಿಗಳ ಶೇಕಡಾವಾರು ಹೆಚ್ಚಳ: ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ 2 ನೇ ತರಗತಿ ಮಟ್ಟದ ಪಠ್ಯಪುಸ್ತಕಗಳನ್ನು ಓದಬಲ್ಲ 3 ನೇ ತರಗತಿ ವಿದ್ಯಾರ್ಥಿಗಳ ಶೇಕಡಾವಾರು ಸ್ವಲ್ಪ ಹೆಚ್ಚಾಗಿದೆ. ಸಮೀಕ್ಷೆಯ ವರದಿಯ ಪ್ರಕಾರ, ಸರ್ಕಾರಿ ಶಾಲೆಗಳಲ್ಲಿ, ಇದು 2022 ರಲ್ಲಿ ಇದ್ದ ಶೇ 7.7 ರಿಂದ 2024 ರಲ್ಲಿ ಶೇ 15.4 ಕ್ಕೆ ದ್ವಿಗುಣಗೊಂಡಿದೆ ಮತ್ತು ಖಾಸಗಿ ಶಾಲೆಗಳಲ್ಲಿ ಇದು ಶೇ 11.7 ರಿಂದ ಶೇ 17.2ಕ್ಕೆ ಏರಿಕೆಯಾಗಿದೆ.

ಎಎಸ್ಇಆರ್ ವರದಿಯ ಪ್ರಕಾರ, 3 ನೇ ತರಗತಿಯ ಸುಮಾರು ಶೇ 21.5 ರಷ್ಟು ವಿದ್ಯಾರ್ಥಿಗಳು 1 ನೇ ತರಗತಿ ಮಟ್ಟದ ಪಠ್ಯವನ್ನು ಓದಬಲ್ಲರು. ಆದರೆ, 2 ನೇ ತರಗತಿ ಮಟ್ಟದ ಪಠ್ಯವನ್ನು ಓದಲಾರರು ಮತ್ತು ಶೇ 15.9 ರಷ್ಟು ಮಕ್ಕಳು 2 ನೇ ತರಗತಿ ಮಟ್ಟದ ಪಠ್ಯವನ್ನು ಓದಬಲ್ಲರು. 5ನೇ ತರಗತಿಯ ಶೇ 32ರಷ್ಟು ಸರಕಾರಿ ಶಾಲೆಗಳ ಹಾಗೂ ಶೇ 37.8ರಷ್ಟು ಖಾಸಗಿ ಶಾಲಾ ಮಕ್ಕಳು ಮಾತ್ರ 2ನೇ ತರಗತಿಯ ಪಠ್ಯವನ್ನು ಓದಬಲ್ಲರು.

ವಿದ್ಯಾರ್ಥಿಗಳಲ್ಲಿ ಸಂಖ್ಯೆಗಳನ್ನು ಗುರುತಿಸುವ ಕೌಶಲ್ಯಗಳು: ವಾರ್ಷಿಕ ಶಿಕ್ಷಣ ಸ್ಥಿತಿಗತಿ ವರದಿ (ಎಎಸ್ಇಆರ್) 2024 ರ ಪ್ರಕಾರ, ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 3 ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಕೇವಲ 23 ಪ್ರತಿಶತದಷ್ಟು ವಿದ್ಯಾರ್ಥಿಗಳು ಮಾತ್ರ ಸಂಖ್ಯಾತ್ಮಕ ಕಳೆಯುವಿಕೆ ಮಾಡಲು ಸಮರ್ಥರಾಗಿದ್ದಾರೆ.

ಸಂಖ್ಯಾತ್ಮಕ ಕೌಶಲ್ಯಗಳನ್ನು ಪರೀಕ್ಷಿಸಲು, ಮಕ್ಕಳು 2 - ಅಂಕಿಯ ಕಳೆಯುವಿಕೆಯ ಲೆಕ್ಕ ಮಾಡಬೇಕು ಎಂದು ನಿರೀಕ್ಷಿಸಲಾಗಿತ್ತು. 5 ನೇ ತರಗತಿಯಲ್ಲಿ ಶೇ 19 ಮತ್ತು 8 ನೇ ತರಗತಿಯಲ್ಲಿ ಶೇ 35ರಷ್ಟು ಸರ್ಕಾರಿ ಶಾಲಾ ಮಕ್ಕಳು ಮಾತ್ರ ಭಾಗಾಕಾರ ಲೆಕ್ಕಗಳನ್ನು ಮಾಡಬಹುದು ಎಂದು ವರದಿ ಬಹಿರಂಗಪಡಿಸಿದೆ. ಇದು ಖಾಸಗಿ ಶಾಲೆಗಳಲ್ಲಿ ಕ್ರಮವಾಗಿ ಶೇ 25 ಮತ್ತು ಶೇ 43 ಆಗಿದೆ.

3 ನೇ ತರಗತಿಯ ಶೇ 16.3ರಷ್ಟು ಮಕ್ಕಳು 9 ರವರೆಗೆ ಸಂಖ್ಯೆಗಳನ್ನು ಗುರುತಿಸಬಲ್ಲರು, ಆದರೆ 99 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಗಳನ್ನು ಗುರುತಿಸಲಾರರು ಮತ್ತು ಶೇ 53 ರಷ್ಟು ಮಕ್ಕಳು 99 ರವರೆಗೆ ಸಂಖ್ಯೆಗಳನ್ನು ಗುರುತಿಸಲಾರರು. ಆದರೆ, ಇವರು ಕಳೆಯುವ ಲೆಕ್ಕ ಮಾಡಲಾರರು. ಸುಮಾರು ಶೇ 22.4 ರಷ್ಟು ವಿದ್ಯಾರ್ಥಿಗಳು ಕಳೆಯುವ ಲೆಕ್ಕ ಮಾಡಬಲ್ಲರು, ಆದರೆ ಇವರು ಭಾಗಾಕಾರ ಲೆಕ್ಕ ಮಾಡಲಾರರು.

ಸರ್ಕಾರಿ ಶಾಲೆಗಳಲ್ಲಿ 3 ನೇ ತರಗತಿಯ ಶೇ 23.9ರಷ್ಟು ವಿದ್ಯಾರ್ಥಿಗಳು ಮಾತ್ರ ಸಂಖ್ಯಾತ್ಮಕ ಕಳೆಯುವಿಕೆಯನ್ನು ಮಾಡಬಲ್ಲವರಾಗಿದ್ದಾರೆ. ಹಿಂದಿನ ಸಮೀಕ್ಷೆಯ ಸಮಯದಲ್ಲಿ ಇದ್ದ ಶೇ 19.6 ಕ್ಕೆ ಹೋಲಿಸಿದರೆ ಫಲಿತಾಂಶಗಳು ಸುಧಾರಿಸಿದರೂ, 2022 ರಲ್ಲಿ ವರದಿಯಾದ ಅದೇ ಫಲಿತಾಂಶಗಳನ್ನು ಕಾಪಾಡಿಕೊಳ್ಳುವ ಮೂಲಕ ಇದು ಶೇ 31.1ರಷ್ಟು ವರದಿ ಮಾಡಿದ ಖಾಸಗಿ ಸಹವರ್ತಿಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ.

ಕರ್ನಾಟಕದಲ್ಲಿ ದಾಖಲಾತಿ: 4 ವರ್ಷದ ಮಕ್ಕಳಲ್ಲಿ, ಪೂರ್ವ ಪ್ರಾಥಮಿಕ ಸಂಸ್ಥೆಗಳಲ್ಲಿ ದಾಖಲಾತಿಯ ಅಖಿಲ ಭಾರತ ಅಂಕಿ - ಅಂಶಗಳು 2018 ರಲ್ಲಿ ಇದ್ದ ಶೇ 76 ರಿಂದ 2022 ರಲ್ಲಿ ಶೇ 82 ರಿಂದ 2024 ರಲ್ಲಿ ಶೇ 83.3 ಕ್ಕೆ ಏರಿದೆ. 2024 ರಲ್ಲಿ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಒಡಿಶಾದಂತಹ ರಾಜ್ಯಗಳಲ್ಲಿ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ದಾಖಲಾತಿ ಪ್ರಮಾಣವು ಶೇ 95 ಕ್ಕಿಂತ ಹೆಚ್ಚಾಗಿದೆ.

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 6-14 ವರ್ಷ ವಯಸ್ಸಿನ ಮಕ್ಕಳ ದಾಖಲಾತಿ ಕುಸಿತ ಕಂಡಿದೆ. ಇದು 2022 ರಲ್ಲಿ ಇದ್ದ ಶೇಕಡಾ 76 ರಿಂದ 2024 ರಲ್ಲಿ ಶೇಕಡಾ 71 ಕ್ಕೆ ಇಳಿದಿದೆ.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ: 2024 ರಲ್ಲಿ, ಸರ್ಕಾರಿ ಶಾಲೆಗಳಲ್ಲಿ ಶೇ 71.1 ರಷ್ಟು 6-14 ವರ್ಷದ ಮಕ್ಕಳು ದಾಖಲಾಗಿದ್ದರು. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯ ಶೇಕಡಾವಾರು ಹಿಂದಿನ ವರ್ಷ 2022 ಕ್ಕೆ ಹೋಲಿಸಿದರೆ (ಶೇ 76) ಶೇ 5 ರಷ್ಟು ಕಡಿಮೆಯಾಗಿದೆ. 15-16 ವರ್ಷ ವಯಸ್ಸಿನ ಶೇ 2.8ರಷ್ಟು ಮಕ್ಕಳು ಶಾಲೆಗೆ ದಾಖಲಾಗಿಲ್ಲ.

15-16 ವರ್ಷ ವಯಸ್ಸಿನ ಬಾಲಕಿಯರು ಬಾಲಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗೆ ದಾಖಲಾಗಿದ್ದಾರೆ ಎಂಬುದು ಗಮನಾರ್ಹವಾಗಿದೆ. 15-16 ವರ್ಷದ ಬಾಲಕರಿಗೆ (ಶೇ 67.2) ಹೋಲಿಸಿದರೆ, ಶೇ 7.8 ಹೆಚ್ಚು ಬಾಲಕಿಯರು (68.3%) ಸರ್ಕಾರಿ ಶಾಲೆಗೆ ದಾಖಲಾಗಿದ್ದಾರೆ. ಸರ್ಕಾರಿ ಶಾಲಾ ದಾಖಲಾತಿಗೆ ಹೋಲಿಸಿದರೆ, ಖಾಸಗಿ ಶಾಲೆಗಳಲ್ಲಿ 6-14 ವರ್ಷದ ಮಕ್ಕಳ ದಾಖಲಾತಿ ಕೇವಲ ಶೇ 28.5 ರಷ್ಟಿದೆ.

ಎಎಸ್ಇಆರ್ ಪ್ರಕಾರ, ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 6-14 ವರ್ಷ ವಯಸ್ಸಿನ ಮಕ್ಕಳ ದಾಖಲಾತಿಯಲ್ಲಿ ಕುಸಿತ ಕಂಡಿದೆ. ಇದು 2022 ರಲ್ಲಿ ಇದ್ದ ಶೇಕಡಾ 76 ರಿಂದ 2024 ರಲ್ಲಿ ಶೇಕಡಾ 71 ಕ್ಕೆ ಇಳಿದಿದೆ. ಆದಾಗ್ಯೂ, ದಾಖಲಾತಿ ಪ್ರಮಾಣವು ಶೇಕಡಾ 69 ರಷ್ಟಿದ್ದ 2018 ಕ್ಕೆ ಹೋಲಿಸಿದರೆ ಈ ಅಂಕಿ ಅಂಶವು ಈಗಲೂ ಹೆಚ್ಚಾಗಿದೆ. ರಾಜ್ಯದ ಶೇ 83ರಷ್ಟು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 60ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ, ಶೇ.22ರಷ್ಟು ಹಿರಿಯ ಪ್ರಾಥಮಿಕ ಅಥವಾ ಪ್ರೌಢಶಾಲೆಗಳಲ್ಲಿ 60ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಆದಾಗ್ಯೂ, ಇದು 2022 ರಿಂದ ಶೇಕಡಾ 17 ರಷ್ಟು ಹೆಚ್ಚಳವಾಗಿದೆ.

ಈ ವಯಸ್ಸಿನವರ ದಾಖಲಾತಿ ಪ್ರಮಾಣವು ಶೇಕಡಾ 95 ಕ್ಕಿಂತ ಹೆಚ್ಚಾಗಿದೆ. ಹೆಚ್ಚುವರಿಯಾಗಿ, 5 ವರ್ಷದ ಮಕ್ಕಳ ದಾಖಲಾತಿಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಕರ್ನಾಟಕದಲ್ಲಿ ಈ ಪ್ರಮಾಣವು ಶೇಕಡಾ 90 ಕ್ಕಿಂತ ಹೆಚ್ಚಾಗಿದೆ.

ಅಂಕಗಣಿತ ಕೌಶಲ್ಯಗಳು: ಖಾಸಗಿ ಶಾಲೆಗಳಲ್ಲಿನ ಶೇ 31ರಷ್ಟು ವಿದ್ಯಾರ್ಥಿಗಳಿಗೆ ಹೋಲಿಸಿದರೆ ಸರಕಾರಿ ಶಾಲೆಗಳಲ್ಲಿ 3ನೇ ತರಗತಿಯ ಶೇ 23ರಷ್ಟು ವಿದ್ಯಾರ್ಥಿಗಳು ಮಾತ್ರ ಸಂಖ್ಯಾತ್ಮಕ ಕಳೆಯುವಿಕೆಯನ್ನು ಮಾಡಬಲ್ಲರು. 5ನೇ ತರಗತಿ ವಿದ್ಯಾರ್ಥಿಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಶೇ 19 ಮತ್ತು ಖಾಸಗಿ ಶಾಲೆಗಳಲ್ಲಿ ಶೇ 35ರಷ್ಟು ವಿದ್ಯಾರ್ಥಿಗಳು ಭಾಗಾಕಾರ ಲೆಕ್ಕ ಮಾಡಬಲ್ಲರು.

ಶಾಲಾ ಸೌಲಭ್ಯಗಳು

ಶಾಲೆಗಳ ಶೇಕಡಾವಾರು2010201820222024

ಮಧ್ಯಾಹ್ನದ

ಬಿಸಿಯೂಟ

ಭೇಟಿಯ ದಿನದಂದು ಮಧ್ಯಾಹ್ನದ ಊಟ ನೀಡುತ್ತಿದ್ದ ಶಾಲೆಗಳು9697.599.699.3
ಮಧ್ಯಾಹ್ನದ ಊಟ ತಯಾರಿಸಲು ಅಡುಗೆಮನೆ / ಶೆಡ್ ಇರುವ ಶಾಲೆಗಳು92.99392.492.5

ಕುಡಿಯುವ

ನೀರು

ಕುಡಿಯುವ ನೀರಿನ ಸೌಲಭ್ಯವಿಲ್ಲದ ಶಾಲೆಗಳು17.313.422.923.7
ಸೌಲಭ್ಯವಿದ್ದರೂ ಕುಡಿಯುವ ನೀರು ಲಭ್ಯವಿಲ್ಲದಿರುವುದು79.99.39.5
ಕುಡಿಯುವ ನೀರು ಸೌಲಭ್ಯವಿರುವ ಶಾಲೆಗಳು75.876.867.866.8
ಒಟ್ಟು100100100100
ಶೌಚಾಲಯಶೌಚಾಲಯ ಸೌಲಭ್ಯವಿಲ್ಲದ ಶಾಲೆಗಳು5.63.34.53.7
ಶೌಚಾಲಯವಿದ್ದರೂ ಅವು ಬಳಸಲಾರದ ಸ್ಥಿತಿಯಲ್ಲಿರುವುದು5625.924.215.7
ಬಳಸಬಹುದಾದ ಶೌಚಾಲಯ ಹೊಂದಿದ ಶಾಲೆಗಳು38.470.871.480.7
ಒಟ್ಟು100100100100

ಹೆಣ್ಣು ಮಕ್ಕಳ

ಶೌಚಾಲಯ

ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇಲ್ಲದ ಶಾಲೆಗಳು18.27.68.56.5
ಪ್ರತ್ಯೇಕ ಶೌಚಾಲಯವಿದ್ದರೂ ಅವುಗಳಿಗೆ ಬೀಗ ಹಾಕರುವುದು31.118.810.54.9
ಪ್ರತ್ಯೇಕ ಶೌಚಾಲಯವಿದೆ, ಬೀಗ ಹಾಕಿಲ್ಲ, ಆದರೆ ಬಳಸುವ ಸ್ಥಿತಿಯಲ್ಲಿಲ್ಲ18.97.114.111
ಪ್ರತ್ಯೇಕ ಶೌಚಾಲಯ ಇದೆ, ಆದರೆ ಕೆಟ್ಟ ಸ್ಥಿತಿಯಲ್ಲಿವೆ31.866.46777.7
ಒಟ್ಟು100100100100
ಲೈಬ್ರರಿಲೈಬ್ರರಿ ಇಲ್ಲ7.61717.410.5
ಲೈಬ್ರರಿ ಇದೆ, ಆದರೆ ಭೇಟಿಯ ದಿನದಂದು ಮಕ್ಕಳು ಇಲ್ಲಿಯ ಪುಸ್ತಕಗಳನ್ನು ಬಳಸುವುದು ಕಾಣಿಸಿಲ್ಲ27.646.830.833.3
ಭೇಟಿಯ ದಿನದಂದು ಮಕ್ಕಳು ಲೈಬ್ರರಿಯ ಪುಸ್ತಕಗಳನ್ನು ಓದುತ್ತಿದ್ದರು64.836.151.956.3
ಒಟ್ಟು100100100100
ವಿದ್ಯುತ್ವಿದ್ಯುತ್ ಸಂಪರ್ಕ ಇರುವ ಶಾಲೆಗಳು-95.397.897.4
ವಿದ್ಯುತ್ ಸಂಪರ್ಕ ಹೊಂದಿರುವ ಶಾಲೆಗಳ ಪೈಕಿ, ಭೇಟಿಯ ದಿನದಂದು ವಿದ್ಯುತ್ ಲಭ್ಯವಿರುವ ಶಾಲೆಗಳ ಶೇಕಡಾವಾರು-87.590.694.5
ಕಂಪ್ಯೂಟರ್ಮಕ್ಕಳಿಗೆ ಬಳಸಲು ಯಾವುದೇ ಕಂಪ್ಯೂಟರ್ ಲಭ್ಯವಿಲ್ಲ70.658.267.664.2
ಕಂಪ್ಯೂಟರ್ ಲಭ್ಯವಿದೆ ಆದರೆ ಭೇಟಿಯ ದಿನದಂದು ಮಕ್ಕಳು ಬಳಸುತ್ತಿರಲಿಲ್ಲ1631.921.522.1
ಭೇಟಿಯ ದಿನದಂದು ಮಕ್ಕಳು ಕಂಪ್ಯೂಟರ್ ಬಳಸುತ್ತಿದ್ದರು13.49.910.913.8
ಒಟ್ಟು100100100100

ಮಧ್ಯಾಹ್ನದ ಊಟ: 2024 ರಲ್ಲಿ ಮಧ್ಯಾಹ್ನದ ಊಟವನ್ನು ನೀಡುವ ಶಾಲೆಗಳಲ್ಲಿ ಮಧ್ಯಾಹ್ನದ ಊಟವನ್ನು ಶೇ 99.3 ರಿಂದ 99.3 ಕ್ಕೆ ಇಳಿಸಲಾಗಿದೆ. ಮಧ್ಯಾಹ್ನದ ಊಟವನ್ನು ಬೇಯಿಸಲು ಕಿಚನ್ / ಶೆಡ್ ಹೊಂದಿರುವ ಶಾಲೆಗಳ ಸಂಖ್ಯೆ ಶೇ 0.1 ರಷ್ಟು ಹೆಚ್ಚಾಗಿದೆ. ಇದು 2022 ರಲ್ಲಿ ಶೇ 92.4 ಮತ್ತು 2024 ರಲ್ಲಿ ಶೇ 92.5 ಆಗಿತ್ತು.

ಕುಡಿಯುವ ನೀರು: 2024 ರಲ್ಲಿ ಶೇ 66.8ರಷ್ಟು ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿದೆ. ಇದು 2022 ರಲ್ಲಿ ಶೇ 67.8 ರಷ್ಟಿತ್ತು. ನೀರಿಲ್ಲದೇ ಸೌಲಭ್ಯದ ಲಭ್ಯತೆಯು 2022 ರಲ್ಲಿ ಶೇ 9.3 ರಷ್ಟಿದೆ ಮತ್ತು 2024 ರಲ್ಲಿ ಇದು ಒಂದೇ ಆಗಿರುತ್ತದೆ. ಶೇ 9.5ರಷ್ಟು ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ.

ಶೌಚಾಲಯಗಳು: 2024 ರಲ್ಲಿ ಶೇ 82.5ರಷ್ಟು ಶಾಲೆಗಳು ಶೌಚಾಲಯ ಸೌಲಭ್ಯ ಹೊಂದಿವೆ. ಇದು 2022 ರಲ್ಲಿ ಇದ್ದ ಶೇ 71.4 ರಿಂದ 9.3 ರಷ್ಟು ಹೆಚ್ಚಾಗಿದೆ. ಶಾಲೆಗಳಲ್ಲಿ ಶೌಚಾಲಯ ಸೌಲಭ್ಯವಿದ್ದರೂ ಬಳಕೆಯಲ್ಲಿಲ್ಲದ ಪ್ರಮಾಣ 2022 ರಲ್ಲಿ ಇದ್ದ ಶೇ 24.2 ರಿಂದ 2024 ರಲ್ಲಿ ಶೇ 15.7 ಕ್ಕೆ ಇಳಿಕೆಯಾಗಿದೆ.

ಬಾಲಕಿಯರ ಶೌಚಾಲಯಗಳು: 2024 ರಲ್ಲಿ, ಪ್ರತ್ಯೇಕ ಶೌಚಾಲಯಗಳಿದ್ದರೂ, ಬೀಗ ಹಾಕಲಾದ ಬಾಲಕಿಯರ ಶೌಚಾಲಯಗಳನ್ನು ಹೊಂದಿರುವ ಶಾಲೆಗಳು 2022 ರಲ್ಲಿ ಶೇ 10.5 ರಿಂದ ಶೇ 4.9 ರಷ್ಟು ಕಡಿಮೆಯಾಗಿದೆ ಮತ್ತು ಬೀಗ ಹಾಕದ ಆದರೆ ಬಳಸಲಾಗದ ಪ್ರತ್ಯೇಕ ಶೌಚಾಲಯ ಹೊಂದಿರುವ ಶಾಲೆಗಳ ಸಂಖ್ಯೆ 2022 ರಲ್ಲಿ ಇದ್ದ ಶೇ 14.1 ರಿಂದ 2024 ರಲ್ಲಿ ಶೇ 11ಕ್ಕೆ ಇಳಿದಿದೆ ಮತ್ತು ಪ್ರತ್ಯೇಕ ಶೌಚಾಲಯ, ಬೀಕ ಹಾಕಲಾರದ ಮತ್ತು ಬಳಸಬಹುದಾದ ಶೌಚಾಲಯಗಳ ಸಂಖ್ಯೆ 2022 ರಲ್ಲಿ ಇದ್ದ ಶೇ 67 ರಿಂದ 2022 ರಲ್ಲಿ ಶೇ 77.7ಕ್ಕೆ ಸುಧಾರಿಸಿದೆ.

ಗ್ರಂಥಾಲಯ: 2022 ರಲ್ಲಿ ಮಕ್ಕಳು ಗ್ರಂಥಾಲಯದ ಪುಸ್ತಕಗಳನ್ನು ಬಳಸುತ್ತಿರುವ ಶಾಲೆಗಳ ಪ್ರಮಾಣ ಶೇ 51.9ರಷ್ಟು ಇತ್ತು. ಇದು 2024 ರಲ್ಲಿ ಶೇ 56.3 ಕ್ಕೆ ಹೆಚ್ಚಳವಾಗಿದೆ. ಆದರೆ, ಮಕ್ಕಳು ಗ್ರಂಥಾಲಯದ ಪುಸ್ತಕಗಳನ್ನು ಬಳಸದ ಶಾಲೆಗಳ ಪ್ರಮಾಣ 2022 ರಲ್ಲಿ ಶೇ 30.8 ಇತ್ತು ಮತ್ತು ಇದು 2024 ರಲ್ಲಿ ಶೇ 33.3 ಕ್ಕೆ ಏರಿದೆ.

ವಿದ್ಯುತ್ ಸಂಪರ್ಕ ಹೊಂದಿರುವ ಶಾಲೆಗಳ ಸಂಖ್ಯೆ: ಇದು 2022 ರಲ್ಲಿ ಇದ್ದ ಶೇ 97.8 ರಿಂದ 2024 ರಲ್ಲಿ ಶೇ 97.4 ಕ್ಕೆ ಇಳಿದಿದೆ. ವಿದ್ಯುತ್ ಸಂಪರ್ಕ ಮತ್ತು ವಿದ್ಯುತ್ ಲಭ್ಯವಿರುವ ಶಾಲೆಗಳ ಪ್ರಮಾಣ 2022 ರಲ್ಲಿ ಶೇ 90.6 ರಷ್ಇತ್ತು ಮತ್ತು ಇದು 2024 ರಲ್ಲಿ ಶೇ 94.5 ಕ್ಕೆ ಸುಧಾರಣೆಯಾಗಿದೆ.

Source:ASER Report-2024
We have attached a file on Annual Status of Education Report (ASER) 2024 Karnataka

ಇದನ್ನೂ ಓದಿ : ಹೈವೇ ನಿರ್ಮಾಣಕ್ಕೆ ಖರ್ಚು ಮಾಡಿದ ಪ್ರತಿ 1 ರೂ.ನಿಂದ ಜಿಡಿಪಿಗೆ 3 ರೂ. ಆದಾಯ: IIM-B - INDIAS HIGHWAY GDP REPORT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.