ಯಾದಗಿರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ನಿರಾಣಿ - ಯಾದಗಿರಿಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಸಚಿವ ಮುರುಗೇಶ್ ನಿರಾಣಿ
🎬 Watch Now: Feature Video
72 ನೇ ಗಣರಾಜ್ಯೋತ್ಸವ ದಿನಾಚಾರಣೆಯನ್ನ ಯಾದಗಿರಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ನಗರದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಸಚಿವ ಮುರುಗೇಶ್ ನಿರಾಣಿ ಧ್ವಜಾರೋಹಣ ನೆರವೇರಿಸಿದರು. ನಂತರ ತೆರೆದ ವಾಹನದಲ್ಲಿ ತೆರಳಿ ಸಚಿವ ನಿರಾಣಿ ವಿವಿಧ ಪರೇಡ್ ವೀಕ್ಷಿಸಿದರು. ನಂತರ ಪೊಲೀಸ್ ಪಡೆಗಳಿಂದ ಪಥಸಂಚಲನ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕಾದ ವೆಂಕಟರೆಡ್ಡಿ ಮುದ್ನಾಳ, ರಾಜು ಗೌಡ, ಜಿ ಪಂ ಅಧ್ಯಕ್ಷ ಬಸನಗೌಡ ಯಡಿಪುರ, ಜಿಲ್ಲಾಧಿಕಾರಿ ಡಾ ರಾಗಪ್ರಿಯಾ ಆರ್, ಪೋಲಿಸ್ ವರಿಷ್ಠಾಧಿಕಾರಿ ರಿಷಿಕೇಶ ಭಗವಾನ್ ಸೋನಾವಾಣೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.