ಹೇಮಾವತಿ ಜಲಾಶಯದಿಂದ 20 ಸಾವಿರ ಕ್ಯುಸೆಕ್ ನೀರು ಬಿಡುಗಡೆ: ಚಿಟ್ಚಾಟ್ - Hassan News
🎬 Watch Now: Feature Video
ಹಾಸನ: ಹೇಮಾವತಿ ಜಲಾಶಯ ಬಹುತೇಕ ಭರ್ತಿಯಾಗಿದ್ದು ಶುಕ್ರವಾರ ಸಂಜೆ 7 ಗಂಟೆಗೆ ಜಲಾಶಯದ 6 ಕ್ರಸ್ಟ್ಗೇಟ್ ಮೂಲಕ 20 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇಂದು ಬೆಳಗ್ಗೆ 6 ಗಂಟೆಗೆ ನೀರು ಬಿಡುವುದನ್ನು ನಿಲ್ಲಿಸಲಾಗಿತ್ತು. ಹೇಮಾವತಿ ಅಣೆಕಟ್ಟು 2,922.00 ಅಡಿ ಸಾಮರ್ಥ್ಯ ಹೊಂದಿದ್ದು, ನಿನ್ನೆ 2,915.51 ಅಡಿ ಭರ್ತಿಯಾಗಿತ್ತು. ಇಂದು 2,916.62 ಅಡಿ ತುಂಬಿದೆ. ಸೋಮವಾರ ಐಸಿಸಿ ಸಭೆ ನಂತರ ಕಾವೇರಿ ನ್ಯಾಯಾಧೀಕರಣ ಆದೇಶದ ಬಂದ ಮೇಲೆ ನದಿಗೆ ನೀರು ಬಿಡಲಾಗುವುದು ಎಂದು ಹೇಮಾವತಿ ಜಲಾಶಯ ಕಾರ್ಯಪಾಲಕ ಇಂಜಿನಿಯರ್ ಗಂಗಾಧರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.