ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ - relatives-take-patient-in-stretcher
🎬 Watch Now: Feature Video

ವಿಜಯಪುರ: ರೋಗಿಯನ್ನ ಸ್ಟ್ರೆಚರ್‌ನಲ್ಲಿ ಕರೆದೊಯ್ಯಲು ಸಿಬ್ಬಂದಿ ಸ್ಪಂದಿಸದೆ ಅಮಾನವೀಯತೆ ಮೆರೆದಿರುವ ಘಟನೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಬಸವನ ಬಾಗೇವಾಡಿ ತಾಲೂಕಿನ ನಂದಿಹಾಳ ಪಿಯು ಗ್ರಾಮದ ರವಿ ಎಂಬ ರೋಗಿ ಕಾಲಿಗೆ ಗಾಯವಾಗಿತ್ತು. ನಡೆಯೋಕಾಗದ ಆತನನ್ನ ಸ್ಟ್ರೆಚರ್‌ನಲ್ಲಿ ವೈದ್ಯರ ಕೊಠಡಿಗೆ ಆಸ್ಪತ್ರೆಯ ಸಿಬ್ಬಂದಿ ಕರೆದುಕೊಂಡು ಹೋಗಬೇಕಿತ್ತು. ಆದರೆ, ಸಿಬ್ಬಂದಿ ಸ್ಪಂದಿಸದ ಕಾರಣ ಸ್ಟ್ರೆಚರ್‌ನ ರೋಗಿಯ ಸಂಬಂಧಿಕರೆ ಎಳೆದೊಯ್ದಿದ್ದಾರೆ. ಸಿಬ್ಬಂದಿಯ ಈ ನಡೆಗೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.