ಕೋಡಿಮಠದ ಶ್ರೀಗೆ ಹೆಬ್ಬೆಟ್ಟು ಕೊಡಲು ಸಿದ್ಧ.. ಬಿಜೆಪಿ ಕಾರ್ಯಕರ್ತನ ಸವಾಲ್ - Ready to give thumbfinger to Kodimatha Sri
🎬 Watch Now: Feature Video
ಮಂಡ್ಯ:ಕೋಡಿಮಠದ ಶ್ರೀಗಳು ಹೇಳಿದಂತೆ ಬಿಜೆಪಿ ಸರ್ಕಾರ ಪೂರ್ಣಾವಧಿ ಅಧಿಕಾರ ಪೂರೈಸದಿದ್ರೇ, ಬಲಗೈ ಹೆಬ್ಬೆಟ್ಟನ್ನು ಶ್ರೀಗಳಿಗೆ ನೀಡುವುದಾಗಿ ಬಿಜೆಪಿ ಕಾರ್ಯಕರ್ತ ಘೋಷಣೆ ಮಾಡಿದ್ದಾನೆ. ಒಂದೊಮ್ಮೆ ಪೂರ್ಣಾವಧಿ ಪೂರೈಸಿದರೆ ನನ್ನನ್ನು ಅವರ ಪಟ್ಟದ ಶಿಷ್ಯನಾಗಿ ನೇಮಕ ಮಾಡಿಕೊಳ್ಳಬೇಕು ಎಂದೂ ಮನವಿ ಮಾಡಿದ್ದಾನೆ. ಮಂಡ್ಯ ಜಿಲ್ಲೆಯ ಉಪ್ಪಾರಕನಹಳ್ಳಿಯ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಎಂಬಾತ ಈ ಸವಾಲು ಹಾಕಿದ್ದಾನೆ. ನಾನು ಶ್ರೀಗಳ ಭಕ್ತ. ಆದರೆ, ಅವರು ಹೇಳಿದಂತೆ ನಡೆದರೆ ನನ್ನ ಬಲಗೈ ಹೆಬ್ಬೆಟ್ಟನ್ನು ದ್ರೋಣಾಚಾರ್ಯರಿಗೆ ಏಕಲವ್ಯ ನೀಡಿದಂತೆ ನೀಡಲು ಸಿದ್ಧ ಎಂದು ಘೋಷಣೆ ಮಾಡಿದ್ದಾನೆ.