ಬಂಟ್ವಾಳದಲ್ಲಿ ಕಂಡು ಬಂತು ಅಪರೂಪದ ಬಿಳಿ ಹೆಬ್ಬಾವು: ವಿಡಿಯೋ ನೋಡಿ - ಕಾವಳಕಟ್ಟೆಯ ನೌಶಾದ್ ಎಂಬುವರ ಮನೆಗೆ ನುಗ್ಗಿದ ಬಿಳಿ ಹೆಬ್ಬಾವು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7475734-104-7475734-1591272740638.jpg)
ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ನೌಶಾದ್ ಎಂಬುವರ ಮನೆಗೆ ಬಿಳಿ ಬಣ್ಣದ ಹೆಬ್ಬಾವೊಂದು ನುಗ್ಗಿದ್ದು, ಗಲಿಬಿಲಿಗೊಂಡ ಮನೆಯವರು ಕೂಡಲೇ ಅವರ ಸ್ನೇಹಿತ ಆಶೀಫ್ಗೆ ಕರೆ ಮಾಡಿ ಉರಗತಜ್ಞ ಸ್ನೇಕ್ ಕಿರಣ್ರನ್ನ ಸಂಪರ್ಕಿಸಿದ್ದಾರೆ. ನಂತರ ಅವರು ಸ್ನೇಹಿತರಾದ ನಿತ್ಯಪ್ರಕಾಶ್ ಬಂಟ್ವಾಳ, ಶ್ರೀಪ್ರಸಾದ್ ಜೊತೆ ಅದನ್ನು ಹಿಡಿದು ವಲಯಾರಣ್ಯಾಧಿಕಾರಿ ಶ್ರೀಧರ್ ಅವರಿಗೆ ನೀಡಿದ್ದು, ಬಳಿಕ ಸುರಕ್ಷಿತವಾಗಿ ಮಂಗಳೂರು ಪಿಲಿಕುಳ ನಿಸರ್ಗಧಾಮಕ್ಕೆ ಬಿಡಲಾಗಿದೆ. ಈ ಬಿಳಿ ಹೆಬ್ಬಾವನ್ನ ಆಲ್ಬಿನೋ ಎಂದು ಕರೆಯಲಾಗುತ್ತದೆ.