ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದೊಳಗೆ ನುಗ್ಗಿದ ಮಳೆ ನೀರು - ತುಮಕೂರು ಮಳೆ ಅವಾಂತರ
🎬 Watch Now: Feature Video
ತುಮಕೂರು ನಗರದಲ್ಲಿ ಸುರಿದ ಭಾರೀ ಪ್ರಮಾಣದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದ ನೆಲ ಮಹಡಿಯಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರನ್ನು ಎರಡು ಅಗ್ನಿಶಾಮಕ ದಳದ ಸಿಬ್ಬಂದಿ, ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ನೀರನ್ನು ಹೊರ ಹಾಕುವ ಕಾರ್ಯಾಚರಣೆ ಮಾಡಿದರು. ಜಿಲ್ಲಾ ಕಸಾಪ ಎದುರು ಇರುವ ಅಮಾನಿಕೆರೆಗೆ ಹೋಗಬೇಕಾಗಿದ್ದ ಮಳೆನೀರು ಸಾಹಿತ್ಯ ಪರಿಷತ್ ಭವನದೊಳಗೆ ನುಗ್ಗಿರೋದು ಇಲ್ಲಿ ಗಮನಾರ್ಹ ಅಂಶವಾಗಿದೆ.
TAGGED:
ತುಮಕೂರು ಮಳೆ ಅವಾಂತರ