ಹುಬ್ಬಳ್ಳಿಯಲ್ಲಿ ಮಳೆರಾಯನ ಆರ್ಭಟ: ವೀಕೆಂಡ್ ಕರ್ಫ್ಯೂ ಮೊದಲೇ ಮನೆ ಸೇರಿದ ಸಾರ್ವಜನಿಕರು - ಮಳೆ
🎬 Watch Now: Feature Video

ಹುಬ್ಬಳ್ಳಿ: ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದ ವಾಣಿಜ್ಯ ನಗರಿ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಗಂಟೆಗೂ ಹೆಚ್ಚು ಕಾಲ ಬಿರುಗಾಳಿ ಸಮೇತ ಗುಡುಗು, ಮಿಂಚಿನೊಂದಿಗೆ ಭಾರಿ ಮಳೆ ಸುರಿದಿದೆ. ಏಕಾಏಕಿ ಸುರಿದ ಮಳೆಯಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವರುಣನಿಂದ ವೀಕೆಂಡ್ ಕರ್ಫ್ಯೂ ಮೊದಲೇ ಸಾರ್ವಜನಿಕರು ಮನೆ ಸೇರುವಂತಾಗಿದೆ. ಜೊತೆಗೆ ನರಗದ ಪ್ರಮುಖ ಬೀದಿಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಬೀದಿ ಬದಿ ಅಂಗಡಿ- ಮುಂಗಟ್ಟುಗಳಿಗೆ ನೀರು ನುಗ್ಗಿದೆ.