ತಗ್ಗಿದ ವರುಣಾರ್ಭಟ... ತಮ್ಮ ಮನೆಗಳತ್ತ ಮರಳುತ್ತಿರುವ ಕೊಡಗಿನ ಗ್ರಾಮಸ್ಥರು! - ಕೊಡಗಿನಲ್ಲಿ ಮಳೆ
🎬 Watch Now: Feature Video
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಂಡಗೇರಿ ಗ್ರಾಮದಲ್ಲಿ ಒಂದು ವಾರದಿಂದ ಸುರಿದ ಮಹಾಮಳೆಗೆ ಕಾವೇರಿ ನದಿ ಉಕ್ಕಿ ಹರಿದಿತ್ತು. ಪರಿಣಾಮ ಗ್ರಾಮಕ್ಕೆ ನೀರು ನುಗ್ಗಿ ಜನರ ಬದುಕು ಅತಂತ್ರಗೊಂಡಿತ್ತು. ಮನೆಗಳಿಗೆ ನೀರು ಬರುತ್ತಿದ್ದಂತೆ ತಮ್ಮ ಪ್ರಾಣ ಉಳಿಸಿಕೊಂಡರೆ ಸಾಕು ಎಂದು ಮನೆ-ಮಠ ತೊರೆದು ಪರಿಹಾರ ಕೇಂದ್ರ ಹಾಗೂ ಸಂಬಂಧಿಕರ ಬಳಿ ಆಶ್ರಯ ಪಡೆದಿದ್ದರು. ಕಳೆದೆರಡು ದಿನಗಳಿಂದ ವರುಣನ ಆರ್ಭಟ ತಗ್ಗಿದ್ದು, ಇದೀಗ ನಿಧಾನವಾಗಿ ಮೂಲ ನೆಲೆಗಳಿಗೆ ಗ್ರಾಮಸ್ಥರು ಮರಳುತ್ತಿದ್ದಾರೆ.