ಲಗ್ಗೆರೆಯಲ್ಲಿ ಕಿತ್ತುಹೋದ ರಸ್ತೆ: ರಾಜಕಾಲುವೆ ಸಮಸ್ಯೆಗೆ ಸಿಕ್ಕಿಲ್ಲ ಮುಕ್ತಿ - Bangalore latest news
🎬 Watch Now: Feature Video
ಬೆಂಗಳೂರು: ಆರ್.ಆರ್.ನಗರ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆ ವಾರ್ಡ್ನಲ್ಲಿ ಈಗಲೂ ಡಾಂಬರು ಕಾಣದ ರಸ್ತೆಗಳಿವೆ. ಇಲ್ಲಿನ ರಸ್ತೆ ಹೊಂಡ-ಗುಂಡಿಗಳಿಂದ ಕೂಡಿದೆ. ಈ ಬಗ್ಗೆ ಸ್ಥಳೀಯ ಮಾಜಿ ಪಾಲಿಕೆ ಸದಸ್ಯರನ್ನು ಕೇಳಿದರೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ. ಚುನಾವಣಾ ನೀತಿ ಸಂಹಿತಿಯಿಂದ ಕೆಲಸ ಮುಂದೂಡಲ್ಪಟ್ಟಿದೆ ಎಂದರು. ಸ್ಥಳೀಯರು ಈ ಭಾಗದ ರಾಜಕಾಲುವೆ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಮಳೆ ಬಂದರೆ ರಾಜಕಾಲುವೆಯ ನೀರು ಈ ಬಡಾವಣೆಗೆ ತುಂಬಿಕೊಳ್ಳುತ್ತದೆ ಎನ್ನುತ್ತಾರೆ. ಮಾಜಿ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ವಾರ್ಡ್ನಲ್ಲಿ ಹಿಂದೆ ವಿದ್ಯುತ್, ನೀರಿನ ಸಮಸ್ಯೆಯಿತ್ತು. ಈಗ ಎಲ್ಲದಕ್ಕೂ ಪರಿಹಾರ ಸಿಕ್ಕಿದೆ. ಲಾಕ್ಡೌನ್ ಸಮಯದಲ್ಲೂ ಬಡವರಿಗೆ ಅಗತ್ಯ ಸೇವೆ ನೀಡಲಾಗಿದೆ ಎಂದಿದ್ದಾರೆ. ರಸ್ತೆ ಸಮಸ್ಯೆಗಳ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.