ಜೋಗಿಮಟ್ಟಿ ವನ್ಯಧಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ - ಜೋಗಿಮಟ್ಟಿ ವನ್ಯಜೀವಿ ಧಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು
🎬 Watch Now: Feature Video
ಚಿತ್ರದುರ್ಗ: ಕೋಟೆನಾಡಿನ ಮಿನಿ ಊಟಿ ಎಂದೇ ಪ್ರಸಿದ್ಧಿ ಪಡೆದಿರುವ ಜೋಗಿಮಟ್ಟಿ ವನ್ಯಜೀವಿ ಧಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ಚಿತ್ರದುರ್ಗದ ಛಾಯಾಗ್ರಾಹಕ ನಾಗರಾಜ್ ತಮ್ಮ ಕ್ಯಾಮರಾದಲ್ಲಿ ಈ ಹೆಬ್ಬಾವಿನ ಚಲನವಲನಗಳನ್ನು ಸೆರೆಹಿಡಿದಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಗಾತ್ರದ ಹಾವು ಟ್ರೆಕ್ಕಿಂಗ್ ಜೋನ್ನಲ್ಲಿ ಕಾಣಿಸಿರುವುದು ಭಯ ಹುಟ್ಟಿಸುವಂತೆ ಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಭಾನುವಾರ ಚಾರಣಿಗರು ಹೆಚ್ಚಾಗಿ ತೆರಳುವ ಸ್ಥಳದಲ್ಲಿ ಅತ್ಯಂತ ದೊಡ್ಡ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿರುವುದು ಪ್ರವಾಸಿಗರ ಗಮನ ಸೆಳೆಯಿತು.
TAGGED:
ಕೋಟೆನಾಡಿನ ಮಿನಿ ಊಟಿ