ನಾಯಿಮರಿಗಳ ಜೀವನ್ಮರಣ ಹೋರಾಟ..ತಾಯಿಯ ರೋಧನೆ ಕಂಡು ಅಗ್ನಿಶಾಮಕ ದಳದಿಂದ ರಕ್ಷಣೆ - fight in the pipe
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10178894-thumbnail-3x2-ghgh.jpg)
ಹಾವೇರಿ: ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಚರಂಡಿ ನೀರಿಗೆ ಸಂಪರ್ಕ ಕಲ್ಪಿಸುವ ಪೈಪ್‌ನಲ್ಲಿ ಸಿಲುಕಿದ್ದ ಮೂರು ನಾಯಿ ಮರಿಗಳನ್ನು ರಕ್ಷಣೆ ಮಾಡಲಾಗಿದೆ. ನಗರದ ಹರ್ಷಾ ವರ್ಷಾ ಕಾಂಪ್ಲೆಕ್ಸ್ನಲ್ಲಿ ಚರಂಡಿ ಪೈಪ್‌ನಲ್ಲಿ ಬೀದಿ ನಾಯಿ, ಮರಿಗಳನ್ನು ಹಾಕಿತ್ತು. ರಾತ್ರಿ ಸುರಿದ ಮಳೆಗೆ ಪೈಪ್‌ನಲ್ಲಿ ನೀರು ತುಂಬಿಕೊಂಡು ಮರಿಗಳು ಜೀವನ್ಮರಣ ಹೋರಾಟದಲ್ಲಿದ್ದವು, ಇದನ್ನು ಕಂಡು ತಾಯಿ ನಾಯಿ ಅಸಹಾಯಕತೆಯಿಂದ ಚೀರಾಡುತ್ತಿದ್ದ ವೇಳೆ ಸ್ಥಳೀಯರು ಅಗ್ನಿಶಾಮಕ ದಳವನ್ನು ಕರೆಯಿಸಿ ಮರಿಗಳನ್ನು ರಕ್ಷಣೆ ಮಾಡಿದ್ದಾರೆ.