ಕೂಡಲಸಂಗಮದಲ್ಲಿ ಮಕರ ಸಂಕ್ರಾಂತಿ ಪುಣ್ಯ ಸ್ನಾನ - ಮಕರ ಸಂಕ್ರಾಂತಿಯ ನಿಮಿತ್ಯ ಪುಣ್ಯ ಸ್ನಾನ
🎬 Watch Now: Feature Video

ಬಾಗಲಕೋಟೆ: ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮದಲ್ಲಿ ಮಕರ ಸಂಕ್ರಾಂತಿಯ ನಿಮಿತ್ತ ಪುಣ್ಯ ಸ್ನಾನ ಮಾಡಿ ಸಾವಿರಾರು ಭಕ್ತರು ಪಾವನರಾದರು. ಕೃಷ್ಣ, ಘಟಪ್ರಭಾ ಹಾಗೂ ಮಲ್ಲಪ್ರಭಾ ನದಿಗಳ ತ್ರಿವೇಣಿ ಸಂಗಮ ಆಗಿರುವುದರಿಂದ, ಸೂರ್ಯ ತನ್ನ ಪಥವನ್ನು ಬದಲಿಸುವ ಸಮಯದಲ್ಲಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರೆ, ಎಲ್ಲ ಪಾಪ ಕರ್ಮಗಳು ದೂರಾಗುತ್ತವೆ ಎಂಬ ನಂಬಿಕೆಯಿಂದ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿ, ಪುಣ್ಯ ಸ್ನಾನ ಮಾಡುತ್ತಾರೆ. ಶಿವ ನಾಮ, ಲಿಂಗದ ಪೂಜೆ ಪುರಸ್ಕಾರ ಮಾಡುವ ಜೊತೆಗೆ ಸಂಗಮನಾಥ ದೇವಾಲಯ ದರ್ಶನ ಪಡೆದುಕೊಂಡು, ಊಟ ಮಾಡಿಕೊಂಡು ಮರಳುತ್ತಾರೆ.