ಮೆಕ್ಯಾನಿಕಲ್ ಎಂಜಿನಿಯರಿಂಗ್ ನನ್ನ ಗುರಿ: ಪಿಯು ಟಾಪರ್ ಕಶ್ಯಪ್ ಮನದಾಳದ ಮಾತು -
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-3015728-thumbnail-3x2-nin.jpg)
ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಟಾಪರ್ ಆಗಿದ್ದಾರೆ. ಅದರಲ್ಲಿ ಮೊದಲ ಟಾಪರ್ ಪಟ್ಟ ಪಡೆದಿರೋ ರಜತ್ ಕಶ್ಯಪ್, 600ಕ್ಕೆ 594 ಅಂಕಗಳನ್ನ ಗಳಿಸಿದ್ದಾರೆ. ಇಷ್ಟು ಅಂಕ ಗಳಿಸಲು ಟಾಪ್ ಸೀಕ್ರೇಟ್ಸ್ ಏನು ಅಂತ ಕೇಳಿದರೆ, ನಗು ಮುಖದಿಂದಲೇ ಇದೆಕ್ಕೆಲ್ಲ ಕಾರಣ ನನ್ನ ಓದು ಅಂತಾರೆ. ತಂದೆ ರಮೇಶ್, ತಾಯಿ ರಮಾ ಜಿ.ಆರ್. ಅವರ ಎರಡನೇ ಮುದ್ದಿನ ಮಗ ರಜತ್ ಕಶ್ಯಪ್ಗೆ ಮುಂದೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿ, ಇಸ್ರೋದಲ್ಲಿ ಕೆಲಸ ಮಾಡುವ ಆಸೆಯಂತೆ. ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ ಕಶ್ಯಪ್.
Last Updated : Apr 16, 2019, 1:22 PM IST