ಕರ್ಫ್ಯೂ ನೆಪದಲ್ಲಿ ಅಂಗಡಿಗಳು ಬಂದ್: ಸರ್ಕಾರದ ನಡೆಗೆ ಸಾರ್ವಜನಿಕರ ಬೇಸರ - ಕರ್ಫ್ಯೂ ನೆಪದಲ್ಲಿ ಅಂಗಡಿಗಳು ಬಂದ್
🎬 Watch Now: Feature Video
ಮೈಸೂರು: ನೈಟ್ ಕರ್ಫ್ಯೂ ಹಾಗೂ ವಾರಂತ್ಯ ಕರ್ಫ್ಯೂ ಹೆಸರಿನಲ್ಲಿ ಅಗತ್ಯೇತರ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದ್ದಕ್ಕೆ ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಇದನ್ನು ನಿಯಂತ್ರಣ ಮಾಡಲು ರಾಜ್ಯ ಸರ್ಕಾ ಬುಧವಾರ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ನೈಟ್ ಕರ್ಫ್ಯೂ ಹಾಗೂ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6ರವರೆಗೆ ವಾರಾಂತ್ಯದ ಕರ್ಫ್ಯೂಗೆ ಆದೇಶ ಮಾಡಿದೆ. ಆದರೆ ಪೊಲೀಸರು ಅಗತ್ಯ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳನ್ನು ಮುಚ್ಚಿಸುತ್ತಿರುವುದಕ್ಕೆ ಸಾರ್ವಜನಿಕರು ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.