ಮುಂಬಡ್ತಿಯಲ್ಲಿ ಅನ್ಯಾಯ ಆರೋಪ... ಶಿಕ್ಷಕರಿಗೆ ವಿಶೇಷ ಸ್ಥಾನಮಾನ ನೀಡುವಂತೆ ಪ್ರತಿಭಟನೆ - Protest to give special status to teachers

🎬 Watch Now: Feature Video

thumbnail

By

Published : Mar 4, 2020, 5:45 PM IST

ಕಲಬುರಗಿ: 371(ಜೆ) ಮುಂಬಡ್ತಿಯಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಲಬುರಗಿ ಅಹಿಂದ ಚಿಂತಕರ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಶಿಕ್ಷಣ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ವಿಶೇಷ ಸ್ಥಾನಮಾನದ ಅನ್ವಯ ನೀಡಬೇಕಾಗಿರೋ ಮೀಸಲಾತಿಯಲ್ಲಿ ಅನ್ಯಾಯ ಹಾಗೂ ಶಿಕ್ಷಕರ ಮುಂಬಡ್ತಿಯಲ್ಲಿಯೂ ಪಕ್ಷಪಾತ ನಡೆಯುತ್ತಿದೆ ಎಂದು ಆರೋಪಿಸಿದರು. ಕೂಡಲೇ ಕಲ್ಯಾಣ ಕರ್ನಾಟಕದ ಶಿಕ್ಷಕರಿಗೆ ಆಗುತ್ತಿರೋ ಅನ್ಯಾಯ ಸರಿಪಡಿಸುವಂತೆ ಹಾಗೂ 455 ಜನ ಪ್ರೌಢ ಶಾಲಾ ಸಹ ಶಿಕ್ಷಕರ ಅವೈಜ್ಞಾನಿಕ ಮುಂಬಡ್ತಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.