ಸಿಬಿಸಿಎಸ್ ಪದ್ಧತಿ- ಕನ್ನಡ ಬೋಧನೆಗೆ ಬಹುದೊಡ್ಡ ಆತಂಕ: ಕನ್ನಡ ಅಧ್ಯಾಪಕರ ಪರಿಷತ್ತಿನಿಂದ ಪ್ರತಿಭಟನೆ - Dharwad protest news
🎬 Watch Now: Feature Video
ವಿವಿಯಲ್ಲಿ ಕನ್ನಡ ಅಧ್ಯಯನ ಉಳಿವಿಗಾಗಿ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕನ್ನಡ ಅಧ್ಯಾಪಕರ ಪರಿಷತ್ತು ವತಿಯಿಂದ ಕುಲಪತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದಿಂದ ಶಾಂತಿಯುತ ಮೆರವಣಿಗೆ ಮೂಲಕ ಆಗಮಿಸಿದ ಅಧ್ಯಾಪಕರು ಕವಿವಿ ಕುಲಪತಿ ಕಚೇರಿ ಎದುರು ಕೆಲಹೊತ್ತು ಪ್ರತಿಭಟಿಸಿದರು.