ಬಸ್ ಸೌಕರ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ.. - chikkaballapura protest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10455953-thumbnail-3x2-vid.jpg)
ಚಿಕ್ಕಬಳ್ಳಾಪುರ: ಶಾಲಾ-ಕಾಲೇಜುಗಳಿಗೆ ಹೋಗಲು ಸಮಯಕ್ಕೆ ಸರಿಯಾಗಿ ಸರ್ಕಾರಿ (ಕೆಎಸ್ಆರ್ಟಿಸಿ) ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟಿಸಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೆ. ಮುತಕದಹಳ್ಳಿ ಬಳಿ ನಡೆದಿದೆ. ತಾಲ್ಲೂಕಿನ ಶಿಡ್ಲಘಟ್ಟದಿಂದ ಕೈವಾರ ಮಾರ್ಗವಾಗಿ ಹೊರಡುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಬಸ್ಗಳು ಬರುತ್ತಿಲ್ಲ ಎಂದು ಬಸ್ಗಳನ್ನು ತಡೆದು ಕೆ.ಎಸ್.ಆರ್.ಟಿ.ಸಿ. ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.