ಬಾರ್ ಮಾಲೀಕನ ಮೇಲೆ ಅಬಕಾರಿ ಅಧಿಕಾರಿಗಳಿಂದ ಹಲ್ಲೆ ಆರೋಪ: ಕ್ಷತ್ರಿಯ ಒಕ್ಕೂಟದಿಂದ ಪ್ರತಿಭಟನೆ - ಧಾರವಾಡದಲ್ಲಿ ಬಾರ್ ಮಾಲೀಕನ ಮೇಲೆ ಅಬಕಾರಿ ಅಧಿಕಾರಿಗಳ ಹಲ್ಲೆ ಖಂಡಿಸಿ ಪ್ರತಿಭಟನೆ
🎬 Watch Now: Feature Video

ಧಾರವಾಡ: ಅಂಗವಿಕಲನ ಮೇಲೆ ಹಲ್ಲೆ ಮಾಡಿದ ಅಬಕಾರಿ ಇಲಾಖೆ ಅಧಿಕಾರಿಗಳನ್ನು ಅಮಾನತುಗೊಳಿಸಿ, ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕ್ಷತ್ರೀಯ ಒಕ್ಕೂಟ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಶೀತಲ ಬಾರ್ಗೆ ಅಬಕಾರಿ ಅಧಿಕಾರಿಗಳು ತಪಾಸಣೆ ಮಾಡುವ ನೆಪದಲ್ಲಿ ಆಗಮಿಸಿ ಬಾರ್ ಮಾಲೀಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಹಲ್ಲೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಅಮಾನತುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಮೂಲಕ ಅಬಕಾರಿ ಸಚಿವರಿಗೆ ಮನವಿ ಸಲ್ಲಿಸಿದರು.
TAGGED:
ಶೀತಲ ಬಾರ್ ಮಾಲೀಕನ ಮೇಲೆ ದಾಳಿ