ಮೈಸೂರು: ಕೊಳಕು ಮಂಡಲ ಹಾವಿನ ರಕ್ಷಣೆ - ಹಾವಿನ ರಕ್ಷಣೆ ಲೇಟೆಸ್ಟ್ ನ್ಯೂಸ್
🎬 Watch Now: Feature Video
ಮೈಸೂರು: ಮನೆಯೊಳಗೆ ದುರ್ವಾಸನೆ ಬೀರುತ್ತಿದ್ದ ಕೊಳಕು ಮಂಡಲ ಹಾವನ್ನು ರಕ್ಷಣೆ ಮಾಡಿ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಕೆ.ಆರ್. ಮಿಲ್ನ ನಿವಾಸಿಯೊಬ್ಬರ ಮನೆಯಲ್ಲಿ ಚಪ್ಪಲಿ ಸ್ಟ್ಯಾಂಡ್ ಕೆಳಗೆ ಅಡಗಿ ಕುಳಿತು ಬುಸುಗುಡುತ್ತಿದ್ದ ಕೊಳಕು ಮಂಡಲ ಹಾವನ್ನು ನೋಡಿ, ನಿವಾಸಿಗಳು ಕೂಡಲೇ ಸ್ನೇಕ್ ಕೆಂಪರಾಜು ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಕೆಂಪರಾಜು ಹಾವನ್ನು ಸುರಕ್ಷಿತವಾಗಿ ಹಿಡಿದು, ಚಾಮುಂಡಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.