ಹೈಟೆನ್ಷನ್ ವಿದ್ಯುತ್ ಕಂಬ ಏರಿದ್ದ ಹೆಬ್ಬಾವಿನ ರಕ್ಷಣೆ - protection of Python
🎬 Watch Now: Feature Video
ಮಂಗಳೂರು : ನಗರದ ಮಿಲಾಗ್ರಿಸ್ ಬಳಿಯ ಹೈಟೆನ್ಷನ್ ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಮೆಸ್ಕಾಂ ಸಿಬ್ಬಂದಿ ರಕ್ಷಿಸಿದ್ದಾರೆ. ಹೈಟೆನ್ಷನ್ ವಿದ್ಯುತ್ ಸರಬರಾಜು ಕಂಬದ ಮೇಲೇರಿದ್ದ ಈ ಹೆಬ್ಬಾವನ್ನು ಕಂಡ ಸ್ಥಳೀಯರು ಈ ಬಗ್ಗೆ ಮೆಸ್ಕಾಂಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿರುವ ಮಲ್ಲಿಕಟ್ಟೆಯ ಮೆಸ್ಕಾಂ ಸಿಬ್ಬಂದಿ ಹೈಟೆನ್ಷನ್ ವಿದ್ಯುತ್ ಕಂಬ ಏರಿದ್ದ ಹೆಬ್ಬಾವನ್ನು ಅಪಾಯದಿಂದ ರಕ್ಷಿಸಿದ್ದಾರೆ. ಮೆಸ್ಕಾಂ ಸಿಬ್ಬಂದಿ ಪ್ರಕಾಶ್ ಲೋಬೋ, ರೊನಾಲ್ಡೊ ಮೊಂತೆರೋ, ತಿಮ್ಮಪ್ಪ ಗೌಡ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.