ಮೈಸೂರಿನಲ್ಲಿ 17 ಲಕ್ಷ ಲಸಿಕೆ ಸಂಗ್ರಹ ಸಾಮರ್ಥ್ಯ: ವ್ಯವಸ್ಥಾಪಕ ಅಶೋಕ್ - Corona vaccine
🎬 Watch Now: Feature Video
ಮೈಸೂರು: ಜಿಲ್ಲೆಯಲ್ಲಿ ಎರಡು ದೊಡ್ಡ ವ್ಯಾಕ್ಸಿನ್ ಕೂಲರ್ಗಳಿದ್ದು, 17 ಲಕ್ಷ ಲಸಿಕೆ ಸಂಗ್ರಹಿಸುವ ಸಾಮರ್ಥ್ಯ ಇದೆ ಎಂದು ವ್ಯವಸ್ಥಾಪಕ ಅಶೋಕ್, ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಈ ತಿಂಗಳ 13ರ ನಂತರ ಕೋವಿಡ್ ಲಸಿಕೆ ಬರಬಹುದು. ಆದ್ದರಿಂದ ಶೇಖರಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಡಿಎಚ್ಒ ಕಚೇರಿ ಪಕ್ಕದ ವ್ಯಾಕ್ಸಿನ್ ಶೇಖರಣಾ ಘಟಕದಲ್ಲಿ ಎರಡು ದೊಡ್ಡ ಗಾತ್ರದ ವ್ಯಾಕ್ಸಿನ್ ಕೂಲರ್ ಇದ್ದು, ಇದರಲ್ಲಿ ಒಂದೊಂದು ವ್ಯಾಕ್ಸಿನ್ ಕೂಲರ್ನಲ್ಲಿ 8.5 ಲಕ್ಷ ಲಸಿಕೆ ಸಂಗ್ರಹಿಸಬಹುದು. ಲಸಿಕೆಯನ್ನು 2-8 ಡಿಗ್ರಿ ತಾಪಮಾನದಲ್ಲಿ ಇಡಬೇಕು ಎಂದು ಅಶೋಕ್ ಮಾಹಿತಿ ನೀಡಿದ್ದಾರೆ.
Last Updated : Jan 6, 2021, 4:50 PM IST