ಕುಷ್ಟಗಿಯಲ್ಲಿ ಅಕಾಲಿಕ ತುಂತುರು ಮಳೆ: ಇಕ್ಕಟ್ಟಿಗೆ ಸಿಲುಕಿದ ಜನತೆ.. - kushtagi rain news
🎬 Watch Now: Feature Video
ಕುಷ್ಟಗಿ (ಕೊಪ್ಪಳ): ಬೆಳಗಿನ ಜಾವದಿಂದ ಕುಷ್ಟಗಿ ತಾಲೂಕಿನಲ್ಲಿ ಅಕಾಲಿಕವಾಗಿ ತುಂತುರು ಮಳೆ ಬೀಳುತ್ತಿದ್ದು. ಜನ ಸಾಮಾನ್ಯರನ್ನು ಅನೀರಿಕ್ಷಿತ ಇಕ್ಕಟ್ಟಿಗೆ ಸಿಲುಕಿಸಿತು. ಅನಿವಾರ್ಯ ಪರಿಸ್ಥಿತಿಯಲ್ಲಿ ಕೊಡೆ ಹಿಡಿದು ಜನ ಸಂಚರಿಸುತ್ತಿರುವ ದೃಶ್ಯ ಕಂಡು ಬಂತು. ಇನ್ನು ಈ ವಾತಾವರಣ ಹಿಂಗಾರು ಹಂಗಾಮಿನ ಬೆಳೆಗೆ ಪ್ರತಿಕೂಲವಾಗಿದ್ದು ರೈತ ಸಮುದಾಯದಿಂದ ಆತಂಕ ವ್ಯಕ್ತವಾಗಿದೆ. ಬಿಳಿಜೋಳ ತೆನೆಯೊಡೆದ ಸಂದರ್ಭದಲ್ಲಿ ಮಳೆಯಾಗಿರುವುದರಿಂದ ಸುಂಕ ತೊಳೆದು ಹೋದರೆ ಕಾಳು ಕಟ್ಟುವ ಪ್ರಮಾಣ ಕಡಿಮೆಯಾಗಲಿದ್ದು, ಮೋಡಕವಿದ ವಾತಾವರಣದಿಂದ ಕಡಲೆಗೆ ಕಾಯಿ ಕೊರಕ ಕೀಟ ಬಾಧೆಯ ಆತಂಕ ವ್ಯಕ್ತವಾಗಿದೆ.