ರಾಮಮಂದಿರ ನಿರ್ಮಾಣ ಶಿಲಾನ್ಯಾಸ ದಿನಾಂಕ ಪ್ರಕಟ.. ಪ್ರಮೋದ್ ಮುತಾಲಿಕ್ ಹರ್ಷ
🎬 Watch Now: Feature Video
ಹುಬ್ಬಳ್ಳಿ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶಿಲಾನ್ಯಾಸಕ್ಕೆ ದಿನಾಂಕ ಪ್ರಕಟವಾಗಿದೆ. ಇದು ಮನಸ್ಸಿಗೆ ಸಂತೋಷ ತಂದಿದೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಹನುಮಂತನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದ ಒಂದು ಶಿಲೆಗೆ ಬೆಳ್ಳಿ ಕವಚ ಮಾಡಿಸಿ ಶ್ರೀರಾಮಸೇನೆಯಿಂದ ಅಯೋಧ್ಯೆಗೆ ತಲುಪಿಸುವ ಮಹತ್ವದ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಇದು ಕರ್ನಾಟಕದ ಹೆಮ್ಮೆಯ ವಿಷಯ. ಸುಮಾರು 500 ವರ್ಷಗಳ ಹೋರಾಟದ ಬಳಿಕ ಜಯ ಸಿಕ್ಕಿದೆ ಎಂದು ಅಭಿಪ್ರಾಯ ಹಂಚಿಕೊಂಡರು.