ಭಾರತ್ ಬಂದ್: ಈಟಿವಿ ಭಾರತದೊಂದಿಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತು - ಭಾರತ್ ಬಂದ್ ಕುರಿತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತು
🎬 Watch Now: Feature Video
ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಲಾಗಿರುವ ಭಾರತ್ ಬಂದ್ ಕುರಿತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈಟಿವಿ ಭಾರತದೊಂದಿಗೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕಾಯ್ದೆಗಳ ಸಂಬಂಧ ಕೇಂದ್ರ ಸರ್ಕಾರ ಹಾಗೂ ರೈತ ನಾಯಕರ ನಡುವೆ ಮಾತುಕತೆ ಮುಂದುವರಿದಿದ್ದರೂ, 'ಭಾರತ್ ಬಂದ್' ಕರೆ ನೀಡಿರುವ ಹಿಂದೆ ರಾಜಕೀಯ ಪಿತೂರಿ ಇದೆ. ಎಂಎಸ್ಪಿ ಮೊದಲಿನಂತೆ ಮುಂದುವರಿಯುತ್ತದೆ. ಮಂಡಿಗಳು ಸಹ ಉಳಿಯುತ್ತವೆ ಎಂದ ಮೇಲೆ ಸಮಸ್ಯೆ ಯಾವ ವಿಚಾರವಾಗಿ?, ರಾಜಕೀಯ ಪಕ್ಷಗಳು ಮುಗ್ಧ ರೈತರನ್ನು ದಾರಿ ತಪ್ಪಿಸುವ ಮೂಲಕ ಅವರನ್ನು ಕೆರಳಿಸುವ ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಈಟಿವಿ ಭಾರತದ ಪ್ರತಿನಿಧಿಯೊಂದಿಗೆ ಸಚಿವ ಪ್ರಕಾಶ್ ಡಾವಡೇಕರ್ ಮಾತನಾಡಿದ್ದಾರೆ.