ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿದ್ದ ಪುನೀತ್ ರಾಜ್‌ಕುಮಾರ್: ವಿಡಿಯೋ - ಪುನೀತ್ ರಾಜ್‌ಕುಮಾರ್
🎬 Watch Now: Feature Video
ರಾಜ್ಯದ ಬೆಳಕಿನ ಹಬ್ಬ ದೀಪಾವಳಿಗೆ ನಟ ಪುನೀತ್ ರಾಜ್‌ಕುಮಾರ್ ಶುಭಾಶಯ ಕೋರಿದ್ದರು. ಆದರೆ, ಹಬ್ಬಕ್ಕೆ ಇನ್ನೂ ನಾಲ್ಕೈದು ದಿನಗಳು ಬಾಕಿ ಇರುವಾಗಲೇ ಎಂದೂ ಬಾರದ ಲೋಕಕ್ಕೆ ಪಯಣಿಸಿರುವುದು ದುರಂತವೇ ಸರಿ. ಮಹಿಳಾ ಸ್ವಸಹಾಯ ಗುಂಪುಗಳನ್ನು ಬೆಂಬಲಿಸಿ ವಿಡಿಯೋ ಮಾಡಿರುವ ಪುನೀತ್, ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಬೆಳಕು ಅಂದರೆ ಜ್ಞಾನ ಹಾಗೂ ಸಮೃದ್ಧಿಯ ಸಂಕೇತ. ಈ ಹಬ್ಬದ ಸಂದರ್ಭದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ದೀಪ ಸಂಜೀವಿನಿ ಹಣತೆಗಳನ್ನು ಖರೀದಿಸೋಣ. ಈ ಮೂಲಕ ಅವರ ಸ್ವಾಭಿಮಾನಕ್ಕೆ ಮತ್ತು ಶ್ರಮವನ್ನು ನಾವೆಲ್ಲರೂ ಸೇರಿ ಗೌರವಿಸೋಣ. ಪ್ರಕೃತಿ ಸ್ನೇಹಿ ದೀಪಾವಳಿ ಆಚೋರಿಸೋಣ ಎಂದಿದ್ದರು.