ತಾವೇ ಅಭ್ಯರ್ಥಿ ಮಾಡಿದ್ದ ಜನ, ಮತಗಟ್ಟೆಗೂ ಹಕ್ಕು ಚಲಾಯಿಸಲು ಭಿಕ್ಷುಕನನ್ನ ಕರೆತಂದರು.. ಇದು ಬಲು ಅಪರೂಪ - ಹುಳಿಮಾವು ಗ್ರಾ.ಪಂ.ಅಭ್ಯರ್ಥಿ ವಿಶೇಷಚೇತನ ಭಿಕ್ಷುಕ ಅಂಕನಾಯಕ
🎬 Watch Now: Feature Video
ಮೈಸೂರು : ಹುಳಿಮಾವು ಗ್ರಾಪಂ ಚುನಾವಣೆ ಕುತೂಹಲ ಕೆರಳಿಸಿದೆ. ಮತದಾರರೇ ಅಭ್ಯರ್ಥಿಯನ್ನ ಮತಗಟ್ಟೆಗೆ ಕರೆತಂದ ಅಪರೂಪದ ಸನ್ನಿವೇಶ ನಡೆದಿದೆ. ಮತ ಚಲಾಯಿಸಲು ಪರದಾಡಿದ ಅಭ್ಯರ್ಥಿ ವಿಶೇಷ ಚೇತನ ಭಿಕ್ಷುಕ ಅಂಕನಾಯಕ ಮತಚಲಾಯಿಸಿ ಹೊರ ಬಂದರು. ಇವರು ಬೊಕ್ಕಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಕಳೆದ ಬಾರಿ ಚುನಾಯಿತರಾದ ಅಭ್ಯರ್ಥಿ ಗ್ರಾಮದ ಅಭಿವೃದ್ದಿಗೆ ಒತ್ತು ನೀಡದ ಆರೋಪ ಕೇಳಿ ಬಂದಿತ್ತು. ಇದರಿಂದ ಬೇಸತ್ತ ಗ್ರಾಮಸ್ಥರು ಭಿಕ್ಷುಕನನ್ನೇ ಕಣಕ್ಕಿಳಿಸಿ ಬುದ್ಧಿ ಕಲಿಸಲು ನಿರ್ಧರಿಸಿದ್ದಾರೆ. ಭಿಕ್ಷುಕ ಅಂಕನಾಯಕ ಮತ ಚಲಾಯಿಸಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.