ಒಂದಕ್ಕಿಂತ ಒಂದು ಚಂದ... ನೆರಳು ಬೆಳಕಿನಾಟ.. ಇವು ‘ಘನೀಕೃತ ನೆನಪುಗಳು - 2019’ - kannadanews
🎬 Watch Now: Feature Video
ಫೋಟೊ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಬೆಂಗಳೂರು (ಪಿಜೆಎಬಿ) ತನ್ನ ವಾರ್ಷಿಕ ಫೋಟೋ ಪ್ರದರ್ಶನವನ್ನು ‘ಘನೀಕೃತ ನೆನಪುಗಳು - 2019’ (ಪ್ರೋಜನ್ ಮೆಮೋರಿಸ್-2019)ನ್ನು ಬೆಂಗಳೂರಿನಲ್ಲಿ ಆಯೋಜಿಸುತ್ತಿದೆ. ‘ವಿಶ್ವ ಛಾಯಾಗ್ರಹಣ ದಿನಾಚರಣೆ ’ಭಾಗವಾಗಿ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನ ಕುಮಾರ ಕೃಪ ರಸ್ತೆಯ ಚಿತ್ರಕಲಾ ಪರಿಷತ್ ಆವರಣದಲ್ಲಿ ಆಗಸ್ಟ್ 29 ರಿಂದ ಸೆಪ್ಟೆಂಬರ್ 1 ರವರೆಗೆ ಹಮ್ಮಿಕೊಳ್ಳಲಾಗಿದೆ. ವಿವಿಧ ಪತ್ರಿಕೆಗಳು, ಏಜೆನ್ಸಿಗಳು ಮತ್ತು ನಿಯತಕಾಲಿಕೆಗಳಿಂದ ಸುಮಾರು 100 ಛಾಯಾಗ್ರಾಹಕ ಪತ್ರಕರ್ತರು ತಾವು ಕ್ಲಿಕ್ಕಿಸಿದ ರಾಜಕೀಯ, ಕ್ರೀಡೆ, ವೈಶಿಷ್ಟ್ಯ ಮತ್ತು ಜೀವನಶೈಲಿ ಛಾಯಾಚಿತ್ರಗಳನ್ನು ಪ್ರದರ್ಶಿಸಲಿದ್ದಾರೆ.
Last Updated : Aug 28, 2019, 4:54 PM IST