ರಸ್ತೆ ಬಂದ್ ಮಾಡಿ ಪ್ರತಿಭಟನೆ: ಧಾರವಾಡದಲ್ಲಿ ರೈತ ಹೋರಾಟಗಾರರು ಪೊಲೀಸ್ ವಶಕ್ಕೆ - protest in hubli dharvad
🎬 Watch Now: Feature Video

ಧಾರವಾಡ: ಧಾರವಾಡ ಹೊರವಲಯದ ರಾಯಾಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ 10ಕ್ಕೂ ಹೆಚ್ಚು ರೈತರು ಹಾಗೂ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಧ್ಯೆ ಹೆದ್ದಾರಿ ತಡೆ ಮಾಡಿ ಹೋರಾಟಗಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ನಂ. 4ರಲ್ಲಿ ಕಳೆದ ರಸ್ತೆ ತಡೆ ನಡೆಸಿದ್ದರು. ಕೊನೆಗೆ ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು ರಸ್ತೆ ತೆರವುಗೊಳಿಸಿದರು. ಹೋರಾಟಗಾರನ್ನು ವಶಕ್ಕೆ ಪಡೆದು ರಸ್ತೆ ಸಂಚಾರಕ್ಕೆ ಪೊಲೀಸರು ಅನುವು ಮಾಡಿದರು.