ಮಠದಲ್ಲಿ ಗುಂಪು ಸೇರಿದ್ದವರಿಗೆ ಬಸ್ಕಿ ಜತೆ ಲಾಠಿ ರುಚಿ ತೋರಿಸಿದ ಪೊಲೀಸ್ - Vijayapura latest news
🎬 Watch Now: Feature Video
ವಿಜಯಪುರ: ಲಾಕ್ಡೌನ್ ಉಲ್ಲಂಘಿಸಿ ಮಠದಲ್ಲಿ ಗುಂಪು ಸೇರಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆ ಇಂಡಿ ತಾಲೂಕಿನ ಬಂಥನಾಳ ಗ್ರಾಮದ ಸಂಗನ ಬಸವೇಶ್ವರ ಮಠದ ಆವರಣದಲ್ಲಿ ನಡೆದಿದೆ. ಮಠದಲ್ಲಿ ಕುಳಿತಿದ್ದವರನ್ನು ಪೊಲೀಸರು ಹೊರಗೆ ಕರೆತಂದು ಪರಸ್ಪರ ಕಿವಿ ಹಿಡಿಸಿ ಬಸ್ಕಿ ಹೊಡಿಸಿದ್ದಾರೆ. ಜತೆಗೆ ಲಾಠಿ ರುಚಿ ತೋರಿಸಿ ಮನೆಯಿಂದ ಹೊರ ಬರದಂತೆ ಎಚ್ಚರಿಕೆ ನೀಡಿದ್ದಾರೆ.