ತುಮಕೂರು: ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಟ್ರ್ಯಾಕ್ಟರ್ ತಡೆದ ಪೊಲೀಸರು - ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಪರೇಡ್
🎬 Watch Now: Feature Video

ಬೆಂಗಳೂರಿನಲ್ಲಿ ನಡೆಯಲಿರುವ ರೈತರ ಜಾಥಾದಲ್ಲಿ ಪಾಲ್ಗೊಳ್ಳಲು ಟ್ರ್ಯಾಕ್ಟರ್ ಜೊತೆ ಹೋಗುತ್ತಿದ್ದ ರೈತರನ್ನು ತುಮಕೂರು ಜಿಲ್ಲೆ ಕೆಬಿ ಕ್ರಾಸ್ ಬಳಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಹತ್ತಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳಲ್ಲಿ ರೈತರು ಬೆಂಗಳೂರಿಗೆ ತೆರಳುತ್ತಿರುವ ಮಾಹಿತಿ ತಿಳಿದ ಪೊಲೀಸರು, ರೈತರನ್ನು ಅಡ್ಡಗಟ್ಟಿ ಟ್ರ್ಯಾಕ್ಟರ್ಗಳನ್ನು ಸ್ಥಳದಲ್ಲಿಯೇ ನಿಲ್ಲಿಸಿ ಬಸ್ನಲ್ಲಿ ಬೇಕಾದರೆ ಬೆಂಗಳೂರಿಗೆ ತೆರಳುವಂತೆ ಹೇಳಿದ್ದಾರೆ. ಇದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರೈತರು ಹಾಗೂ ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ.