ಬಿತ್ತನೆ ಬೀಜ ಪಡೆಯಲು ಸಾಲು ನಿಂತಿದ್ದ ರೈತರ ಮೇಲೆ ಪೊಲೀಸ್ ದರ್ಪ - ಬಿತ್ತನೆ ಬೀಜ ಪಡೆಯಲು ನೂಕುನುಗ್ಗಲು

🎬 Watch Now: Feature Video

thumbnail

By

Published : Oct 10, 2019, 5:12 AM IST

ಯಾದಗಿರಿ: ಶೇಂಗಾ ಬಿತ್ತನೆ ಬೀಜ ಪಡೆಯುವುದಕ್ಕೆ ರೈತ ಸಂಪರ್ಕ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತಿದ್ದ ರೈತರ ಮೇಲೆ ಪೊಲೀಸಪ್ಪನೋರ್ವ ದರ್ಪ ಮೆರೆದಿದ್ದಾನೆ. ಶೇಂಗಾ ಬಿತ್ತನೆ ಬೀಜ ಪಡೆಯುವುದಕ್ಕೆ ಬೆಳಗ್ಗೆಯಿಂದ ರೈತ ಸಂಪರ್ಕ ಕೇಂದ್ರ ಬಳಿ ಮಹಿಳೆಯರು ಸೇರಿದಂತೆ ನೂರಾರು ಮಂದಿ ರೈತರು ಜಮಾಯಿಸಿದರು. ಈ ವೇಳೆ ನೂಕುನುಗ್ಗಲಾಗಿದ್ದು, ರೈತರ ನಿಯಂತ್ರಿಸಲು ಹೋದ ಪೊಲೀಸಪ್ಪನೋರ್ವ ರೈತನಿಗೆ ಕಪಾಳ ಮೋಕ್ಷ ಮಾಡಿದ್ದಾನೆ.  ಯಾದಗಿರಿಯ ರೈತ ಸಂಪರ್ಕ ಕೇಂದ್ರದಲ್ಲಿ ಈ ಘಟನೆ  ನಡೆದಿದ್ದು, ಪೊಲೀಸ್​ ವರ್ತನೆಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.