ಕೊಡಗು ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆ: ಕುಣಿದು ಕುಪ್ಪಳಿಸಿದ ಹೆಡ್ಕಾನ್ಸ್ಟೇಬಲ್! - ಹೆಡ್ಕಾನ್ಸ್ಟೇಬಲ್ ಡ್ಯಾನ್ಸ್
🎬 Watch Now: Feature Video
ಕೊಡಗು: ಗಣೇಶ ಮೂರ್ತಿ ನಿಮಜ್ಜನ ಮೆರವಣಿಯ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ ಡಿಜೆ ಹಾಡಿಗೆ ಹೆಜ್ಜೆ ಹಾಕಿದ್ದು,ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಕೊಡಗಿನ ಸೋಮವಾರಪೇಟೆ ತಾಲೂಕಿನ ಹಾರಂಗಿಯಲ್ಲಿ ಈ ಘಟನೆ ನಡೆದಿದ್ದು, ಹಾರಂಗಿ ಗಣೇಶ ಮೂರ್ತಿ ನಿಮಜ್ಜನ ಮೆರವಣಿಯ ಭದ್ರತೆಗೆ ಆಗಮಿಸಿದ್ದ ಹೆಡ್ಕಾನ್ಸ್ಟೇಬಲ್ ಕೈಯಲ್ಲಿ ಲಾಠಿ ಹಿಡಿದು, ಸಮವಸ್ತ್ರದಲ್ಲೇ ಮಹಿಳೆಯರು ಹಾಗೂ ಮಕ್ಕಳ ನಡುವೆ ಮ್ಯೂಸಿಕ್‌ಗೆ ಸ್ಟೆಪ್ ಹಾಕಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.